ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಸಾವು; ರಾತ್ರಿಯಿಡೀ ಕಾರ್ಯಾಚರಣೆ ವಿಫಲ

ಹೈದರಾಬಾದ್: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ 120 ಅಡಿ ಬೋರ್ವೆಲ್​ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಆಟವಾಡುತ್ತಿದ್ದ ಬಾಲಕ ಸಾಯಿ ವರ್ಧನ್ ಕಾಲು ಜಾರಿ ಬೋರ್’ವೆಲ್’ಗೆ ಬಿದ್ದಿದ್ದ. ಈತನನ್ನು ಉಳಿಸಿಕೊಳ್ಳಲು ಸುದೀರ್ಘ ಕಾರ್ಯಾಚರಣೆ ನಡೆಸಲಾಯಿತಾದರೂ ಪ್ರಯತ್ನ ಸಫಲವಾಗಲಿಲ್ಲ.

ರೈತರೊಬ್ಬರು ಕೃಷಿ ಚಟುವಟಿಕೆಗಾಗಿ ಬುಧವಾರ ಬೋರ್ವೆಲ್ ಅನ್ನು 120 ಅಡಿ ಅಗೆಸಿದ್ದರು. ಆದರೆ, ನೀರು ಲಭ್ಯವಾಗಿರಲಿಲ್ಲ. ಸಂಜೆ ಹೊತ್ತಿಗೆ ಆಟವಾಡುತ್ತಿದ್ದ ಬಾಲಕ ಈ ಬೋರ್’ವೆಲ್’ಗೆ ಬಿದ್ದಿದ್ದಾನೆ. ನಿನ್ನೆ ರಾತ್ರಿಯಿಡೀ ಕಾರ್ಯಾರಣೆ ನಡೆಸಿ ನಸುಕಿನ ಜಾವ 4ಗಂಟೆಗೆ ಮಗುವನ್ನು ಮೇಲಕ್ಕೆ ತರಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದ.  ಕೆಲವು ದಿನಗಳ ಹಿಂದಷ್ಟೇ ಈ ಬಾಲಕ ತನ್ನ ಅಜ್ಜಿಯ ಮನೆಗೆ ಬಂದಿದ್ದ.

ಇದನ್ನೂ ಓದಿ.. ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್  

ಸಾಮಾಜಿಕ ಜಾಲತಾಣಗಳಲ್ಲಿ ‘ಜೂನಿಯರ್ ರಾಜಾಹುಲಿ’ಗೆ ಸಕತ್ ಲೈಕ್ಸ್

Related posts