ಮ್ಯಾನ್ಮಾರ್-ಥೈಲ್ಯಾಂಡ್‌ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು

ಮ್ಯಾನ್ಮಾರ್: ಭೀಕರ ಭೂಕಂಪ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ ದೇಶಗಳನ್ನು ಸ್ಮಶಾನವನ್ನಾಗಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ.

ಎರಡೂ ದೇಶಗಳಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಟ್ಟಡಗಳು ಕುಸಿದು ಹಿಂದೆಂದೂ ಕಂಡರಿಯದ ರೀತಿ ಮಾರಣಹೋಮವೇ ಸಂಭವಿಸಿದೆ.

ಮ್ಯಾನ್ಮಾರ್‌ ಸರ್ಕಾರದ ಮೂಲಗಳ ಪ್ರಕಾರ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000ಕ್ಕೆ ಏರಿಕೆಯಾಗಿದೆ. 2 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಂಡಲೇ ಪ್ರದೇಶದವೊಂದರಲ್ಲಿಯೇ ಭೂಕಂಪಕ್ಕೆ 694 ಮಂದಿ ಮೃತಪಟ್ಟಿದ್ದಾರೆ

Related posts