ಮದ್ಯಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್

 

ಬೆಂಗಳೂರು: ಕೊರೋನಾ ವೈರಾಣುವಿನ ಅವತಾರದ ಕಾರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಮೊದಲೆರಡು ಅವಧಿಯ ಲಾಕ್‌ಡೌನ್ ಸಂದರ್ಭದಲ್ಲಿ ಕಠಿಣ ನಿರ್ಬಂಧವಿತ್ತು. ಹಾಗಾಗಿ ಮದ್ಯ ಮಾರಾಟ ಇರಲಿಲ್ಲ. ಮೇ 4ರ ನಂತರ ರಾಜ್ಯಾದ್ಯಂತ ಆಯ್ದ ಮದ್ಯದಂಗಡಿಗಳಲ್ಲಿ ವಹಿವಾಟು ಆರಂಭವಾಗಿದೆ.

ಸುಮಾರು 40 ದಿನಗಳಿಂದ ಎಣ್ಣೆಯಿಲ್ಲದೆ ಪರದಾಡುತ್ತಿದ್ದ ಮದ್ಯಪ್ರಿಯರು ಯಾವಾಗ ವೈನ್ ಶಾಪ್ ತೆರೆಯಲು ಸರ್ಕಾರ ಆದೇಶಿಸಿತೋ ಅದಾಗಲೇ ಅಮಲಿನಲ್ಲಿ ತೇಲಾಡಲಾರಂಭಿಸಿದರು. ಮೊದಲೆರಡು ದಿನ ವೈನ್ ಶಾಪ್‌ಗಳಲ್ಲಿ ನೂಕು ನುಗ್ಗಲು ಉಂಟಾಯಿತು. ಆದರೆ ಇದೀಗ ಅದೇ ಎಣ್ಣೆ ಪ್ರಿಯರಿಗೆ ಕಹಿ ಸುದ್ದಿ ಸಿಗುವ ಮುನ್ಸೂಚನೆ ವ್ಯಕ್ತವಾಗುತ್ತಿದೆ. ಈಗಾಗಲೇ ಬಹುತೇಕ ವೈನ್ ಸ್ಟೋರಗ‌ಗಳಲ್ಲಿ ಮದ್ಯ ಸಂಗ್ರಹ ಖಾಲಿಯಾಗಿದೆ. ಕೊಪ್ಪಳ ಸಹಿತ ಹಲವು ಜಿಲ್ಲೆಗಳಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ.. ಜೊತೆ ಜೊತೆಯಲಿ.. ನನ್ನರಸಿ ರಾಧೆ.. ನಮ್ಮನೆ ಯುವರಾಣಿ.. ಗಟ್ಟಿಮೇಳ.. ಯಾವ ಸೀರಿಯಲ್ ಶೂಟಿಂಗ್? ಲೆಕ್ಕಾಚಾರ ಶುರು..

ಪ್ರಸ್ತುತ ಪರಿಸ್ಥಿತಿಯಲ್ಲಿ ಹಳೇ ಸ್ಟಾಕ್‌ಗಳು ಮಾರಾಟವಾಗಿವೆಯೇ ಹೊರತು, ಹೊಸ ಉತ್ಪನ್ನಗಳಲ್ಲ. ಮದ್ಯ ತಯಾರಿಕಾ ಕಂಪೆನಿಗಳಲ್ಲೂ ಹೊಸ ಪ್ರಕ್ರಿಯೆ ಬಿರುಸುಗೊಂಡಲ್ಲಿ ಮಾತ್ರ ಸಮರ್ಪಕವಾಗಿ ಎಣ್ಣೆ ಪೂರೈಕೆಯಾಗಬಹುದು. ಅಷ್ಟೇ ಅಲ್ಲ, ಕೆಲ ಅಂಗಡಿಗಳಲ್ಲಿ ಮಾರ್ಗಸೂಚಿ ನಿಯಮ ಪಾಲಿಸಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿವೆ. ಜೊತೆಗೆ ಹಲವೆಡೆ ಮದ್ಯಂಗಡಿ ವಿರುದ್ದ ಮಹಿಳೆಯರು ಸಿಡಿದೆದ್ದಿದ್ದು ವೈನ್ ಶಾಪ್‌ಗಳನ್ನು ಮುಚ್ಚಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಈ ಒತ್ತಡಗಳ ನಡುವೆ ಸರ್ಕಾರದ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಿದೆ.

ಇದನ್ನೂ ಓದಿ.. ವಿಚಿತ್ರ ಭಕ್ತಿ ಪರಾಕಾಷ್ಠೆ; ಮರ್ಮಾಂಗವನ್ನೇ ಕತ್ತರಿಸಿ ಶಿವನಿಗೆ ಸಮರ್ಪಿಸಿದ ಭೂಪ 

 

Related posts