ಕೊರೋನಾ ಕೇಸ್; ಖಷಿಯಲ್ಲಿರುವವರಿಗೆ ಇದು ನಿಜಕ್ಕೂ ಶಾಕ್ ನ್ಯೂಸ್

ದೆಹಲಿ: ದೇಶಾದ್ಯಂತ ಲಾಕ್‌ಡೌನ್’ ಸಡಿಲಿಕೆಯಾಗಿದೆ ಎಂದು ಖಷಿಯಲ್ಲಿರುವವರಿಗೆ ಇದು ನಿಜಕ್ಕೂ ಶಾಕ್ ನ್ಯೂಸ್. ದೇಶಾದ್ಯಂತ ಕೊರೋನಾದ ಕರಾಳ ತರಂಗ ಹೆಚ್ಚಾಗಿದ್ದು ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇವೆ. ಮಂಗಳವಾರ ದೇಶದಲ್ಲಿನ ಕೊರೋನಾ ಬೆಳವಣಿಗೆಯನ್ನು ಗಮನಿಸಿದರೆ ನಾವು ಸೇಫ್ ಅಲ್ಲ ಎಂಬ ಭಾವನೆ ಮೂಡುವುದು ಸಹಜ.

ದೇಶಾದ್ಯಂತ ಮಂಗಳವಾರ ಒಂದೇ ದಿನ 4885 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಭಾರತದಲ್ಲಿ ಕೊವಿಡ್-19 ಪಾಸಿಟಿವ್ ಕೇಸ್‌ಗಳ ಸಂಖ್ಯೆ 49,336ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ 156 ಮಂದಿ ಈ ಸೋಂಕಿಗೆ ಬಲಿಯಾಗಿದ್ದು, ಕೊರೋನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯೂ 1614ಕ್ಕೆ ತಲುಪಿದೆ.

ಇದನ್ನೂ ಓದಿ.. ಮದ್ಯಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್

ಲಾಕ್‌ಡೌನ್ 3ನೇ ಅವಧಿಯಲ್ಲಿ ಕೆಲ ಮಾರ್ಪಾಡು ಮಾಡಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಜನರ ಓಡಾಟವೂ ಹೆಚ್ಚಾಗಿದೆ. ಆ ಮಾತ್ರಕ್ಕೆ ಪಾಸಿಟಿವ್ ಕೇಸುಗಳು ಈಗಲೇ ಹೆಚ್ಚಾಗಿದ್ದಲ್ಲ. ಲಾಕ್’ಡೌನ್ ಕಠಿಣ ನಿಯಮಗಳು ಜಾರಿಯಲ್ಲಿದ್ದಾಗಲೇ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡಿದ್ದು, ಇದೀದ ಜನಸಂದಣಿ ನೂರ್ಮಡಿಗೊಂಡಿರುವುದರಿಂದ ಮುಂದೆ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಕಾಡತೊಡಗಿದೆ.

ಮಹಾರಾಷ್ಟ್ರ, ಗುಜರಾತ್, ದೆಹಲಿ ರಾಜ್ಯಗಳಲ್ಲಿ ಈಗಿನ್ನೂ ಶೋಚನೀಯ ಸ್ಥಿತಿ ಇದೆ. ಆ ರಾಜ್ಯಗಳಲ್ಲಿ ಮಂಗಳವಾರ ದೃಢಪಟ್ಟ ಸಂಖ್ಯೆಗಳು ಅತ್ಯಂತ ಕಳವಳಕಾರಿ.

  • ಮಹಾರಾಷ್ಟ್ರದಲ್ಲಿ 841 ಹೊಸ ಕೇಸ್
  • ತಮಿಳುನಾಡಿನಲ್ಲಿ 508 ಹೊಸ ಕೇಸ್
  • ಗುಜರಾತ್‌ನಲ್ಲಿ 441 ಹೊಸ ಸೋಂಕು ಪ್ರಕರಣ
  • ದೆಹಲಿಯಲ್ಲೂ 206 ಹೊಸ ಪ್ರಕರಣ
  • ಮಧ್ಯಪ್ರದೇಶದಲ್ಲಿ 107 ಕೇಸ್

ಇದನ್ನೂ ಓದಿ.. ಜೊತೆ ಜೊತೆಯಲಿ.. ನನ್ನರಸಿ ರಾಧೆ.. ನಮ್ಮನೆ ಯುವರಾಣಿ.. ಗಟ್ಟಿಮೇಳ.. ಯಾವ ಸೀರಿಯಲ್ ಶೂಟಿಂಗ್? ಲೆಕ್ಕಾಚಾರ ಶುರು..

 

Related posts