ಬೆಂಗಳೂರು: ಹಾಸನದಲ್ಲಿ ಗೃಹಸಚಿವರ ಬೆಂಗಾವಲು ವಾಹನ ಗುದ್ದಿ ಮೃತಪಟ್ಟ ಬೈಕ್ ಸವಾರನನ್ನು ಮಂತ್ರಿ ಅರಗ ಜ್ಞಾನೇಂದ್ರ ಅವರು ತಿರುಗಿಯೂ ನೋಡದಂತೆ ಕಾಲ್ಕಿತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಇಂತಹ ಅಮಾನವೀಯ ನಡವಳಿಕೆಯ ಗೃಹಸಚಿವರಿಂದ ಬೇರೇನು ನಿರೀಕ್ಷೆ ಮಾಡಬಹುದು? ಎಂದು ಪ್ರಶ್ನಿಸಿದೆ. ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ ಪರಿಹಾರ ನೀಡಿ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಬೇಕು ಕಾಂಗ್ರೆಸ್ ಒತ್ತಾಯಿಸಿದೆ.
ಹಾಸನದಲ್ಲಿ ಗೃಹಸಚಿವರ ಬೆಂಗಾವಲು ವಾಹನ ಗುದ್ದಿ ಮೃತಪಟ್ಟ ಬೈಕ್ ಸವಾರನನ್ನು @JnanendraAraga ಅವರು ವಾಹನ ನಿಲ್ಲಿಸದೆ, ತಿರುಗಿಯೂ ನೋಡದಂತೆ ಕಾಲ್ಕಿತ್ತಿದ್ದಾರೆ.
ಇಂತಹ ಅಮಾನವೀಯ ನಡವಳಿಕೆಯ ಗೃಹಸಚಿವರಿಂದ ಬೇರೇನು ನಿರೀಕ್ಷೆ ಮಾಡಬಹುದು?
ಸರ್ಕಾರ ಕೂಡಲೇ ಮೃತನ ಕುಟುಂಬಕ್ಕೆ ಪರಿಹಾರ ನೀಡಿ ಪ್ರಕರಣದ ಪ್ರಾಮಾಣಿಕ ತನಿಖೆ ನಡೆಸಬೇಕು. pic.twitter.com/SUuiwkAJk5— Karnataka Congress (@INCKarnataka) March 2, 2023