ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅವ್ಯವಹಾರ, 80 ಕೋಟಿಯಷ್ಟು ‘ಕಿಕ್ ಬ್ಯಾಕ್..’! ರಮೇಶ್ ಬಾಬು ಆರೋಪ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ 200 ಕೋಟಿ ಅವ್ಯವಹಾರದ ಬಗ್ಗೆ ಅದರಲ್ಲಿ 80 ಕೋಟಿಯಷ್ಟು ಕಿಕ್ ಬ್ಯಾಕ್.. ಇದು ಮಾಜಿ ಶಾಸಕ, ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ರಾಜ್ಯ ಸರ್ಕಾರದ ವಿರುದ್ದ ಸಿಡಿಸಿರುವ ಬಾಂಬ್.‌

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ಗಂಭೀರ ಆರೋಪ ಮಾಡಿದರು. ಅಬಕಾರಿ ಇಲಾಖೆಯಲ್ಲಿನ 200 ಕೋಟಿ ಅವ್ಯವಹಾರದ ಬಗ್ಗೆ ಅದರಲ್ಲಿ 80 ಕೋಟಿಯಷ್ಟು ಕಿಕ್ ಬ್ಯಾಕ್ ಕುರಿತು ಇಂದು ಪ್ರಸ್ತಾಪ ಮಾಡಿದರು.

ರಾಜ್ಯದಲ್ಲಿ ಚುನಾವಣೆ ನಿಮಿತ್ತವಾಗಿ ಪ್ರಧಾನಮಂತ್ರಿಗಳು ಕಳೆದ ಆರು ತಿಂಗಳಲ್ಲಿ ಕರ್ನಾಟಕಕ್ಕೆ ಪದೇ ಪದೆ ಆಗಮಿಸುತ್ತಿದ್ದಾರೆ. ವಿಪರ್ಯಾಸ ಎಂದರೆ, ಅವರು ಪೇಸಿಎಂ, 40% ಕಮಿಷನ್, ರಾಜ್ಯದಲ್ಲಿನ ಹಗರಣಗಳ ಬಗ್ಗೆ ಪ್ರಧಾನಮಂತ್ರಿಗಳು ಕೇಂದ್ರ ಗೃಹಸಚಿವರು ಮಾತನಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ಅಬಕಾರಿ ಇಲಾಖೆ ಮಾತ್ರವಲ್ಲ, ಇನ್ನು ಇತರೆ ಇಲಾಖೆಯಲ್ಲಿನ ಹಗರಣಗಳ ಬಗ್ಗೆ ಕಾಂಗ್ರೆಸ್ ಪಕ್ಷ ದಾಖಲೆ ಸಮೇತ ಮುಂದಿಡುತ್ತೇವೆ ಎಂದರು.

ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದ್ದು, ಇದಕ್ಕೆ ಇಡೀ ಸರ್ಕಾರ ಬಲಿಯಾಗಿದ್ದು, ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಭಾಗಿಯಾಗಿದ್ದಾರೆ. ಇದರಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗಿದ್ದು ಜನರಲ್ಲಿ ನಿರಾಸೆ ಭಾವನೆ ಮೂಡಿದೆ. ಅನೇಕ ಇಲಾಖೆಗಳಲ್ಲಿ ಹಗರಣ ಬರುತ್ತಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಮೋದಿ ಅವರನ್ನು ಕರೆತರುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಈ ಹಿಂದಿನಿಂದ ಸರ್ಕಾರದ ಅಕ್ರಮದ ಬಗ್ಗೆ ದಾಖಲೆ ಸಮೇತ ಬಹಿರಂಗ ಮಾಡುತ್ತಿದ್ದು, ಇಂದು ಅಬಕಾರಿ ಇಲಾಖೆ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ಇಲಾಖೆಗಳ ಹಗರಣಗಳ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ರಮೇಶ್ ಬಾಬು ಹೇಳಿದರು.

Related posts