ಸೇವೆಯ ಹಿರಿಮೆ, ಪುರಸ್ಕಾರದ ಗರಿಮೆ; KSRTC ಮಡಿಲಿಗೆ ಮತ್ತೆರಡು ಪ್ರಶಸ್ತಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯವೈಖರಿಗೆ ಸಾಲು ಸಾಲು ಪುರಸ್ಕಾರಗಳು ಸಿಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಏಷ್ಯಾದಲ್ಲೇ ಅತ್ಯುತ್ತಮ ಎಂಬ ಪ್ರಶಸ್ತಿ ಪಡೆದಿರುವ KSRTCಗೆ ಇದೀಗ ಮತ್ತೆರಡು ಪ್ರಶಸ್ತಿಗಳು ಘೋಷಣೆಯಾಗಿವೆ.

ಕಾಮಕಾಜಿ ಬಿ 2 ಬಿ ಮೀಡಿಯಾ ರವರು ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್‌ ಹಾಗೂ ಸಪ್ಲೈ ಚೈನ್‌ ಲೀಡರ್‌ ಶಿಪ್‌ ಪ್ರಶಸ್ತಿಯು KSRTCಗೆ ಸಿಗಲಿವೆ.

ಮತ್ತೆರಡು ಪ್ರಶಸ್ತಿಗಳು

ಅತ್ಯುತ್ತಮ ಉದ್ಯೋಗದಾತ ಹಾಗೂ
ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ನಿಗಮಕ್ಕೆ ಪ್ರಶಸ್ತಿ ಲಭಿಸಿವೆ.

ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 14ರಂದು ಸೆಪ್ಟಂಬರ್‌ 2023 ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Related posts