ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ; ನಟ ಪವನ್ ಕಲ್ಯಾಣ್ ಪುತ್ರ ಅಸ್ವಸ್ಥ

ಸಿಂಗಾಪುರ: ಸಿಂಗಾಪುರ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆ ಶಾಲೆಯಲ್ಲಿ ಕಲಿಯುತ್ತಿದ್ದ ಅನೇಕ ವಿದ್ಯಾರ್ತಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ಪುತ್ರ ಕೂಡಾ ಗಂಭೀರವಾಗಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿಮಾಡಿವೆ.

ಪವನ್ ಕಲ್ಯಾಣ ಅವರ ಪುತ್ರ ಮಾರ್ಕ್ ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು,ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಸಿಂಗಾಪುರದಲ್ಲಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Related posts