5 ಸ್ಟೇಟ್ಸ್ ಎಲೆಕ್ಷನ್ : ರಾಜಸ್ಥಾನದಲ್ಲಿ ‘ಬಿಜೆಪಿ’ಯೇ ರಾಜ

ದೆಹಲಿ: ಮಿನಿ ಮಹಾಸಮರದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದ್ದು, ರಾಜಸ್ಥಾನದಲ್ಲೂ ಕಮಲ ಪಕ್ಷವೇ ‘ರಾಜ’ ಎನಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಯಂತೆಯೇ ಜಯಭೇರಿ ಭಾರಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಣ್ಣಿಸಲಾಗುತ್ತಿರುವ ಈ ಚುನಾವಣಾ ಪೈಕಿ ರಾಜಸ್ಥಾನದಲ್ಲೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡಿದೆ.

199 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ 100 ಸ್ಥಾನಗಳನ್ನು ಗೆದ್ದ ಪಕ್ಷ ಸರ್ಕಾರ ರಚನೆ ಮಾಡಬಹುದಾಗಿದ್ದು, ಬಿಜೆಪಿ ಅದಕ್ಕಿಂತಲೂ ಹೆಚ್ಚಿನ ಬಹುಮತದೊಂದಿಗೆ ಜಯಭೇರಿ ಭಾರಿಸಿದೆ.

ಬಲಾಬಲ ಹೀಗಿದೆ.

ಒಟ್ಟು ಸ್ಥಾನಗಳು: 199

ಮ್ಯಾಜಿಕ್ ನಂಬರ್: 100 

ಬಿಜೆಪಿ – 115

ಕಾಂಗ್ರೆಸ್ – 70

ಇತರರು – 14

Related posts