ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಯೋಧರು ಸಮವಸ್ತ್ರದೊಂದಿಗೆ ನಡೆಸಿದ ರಿಹರ್ಸಲ್ ಗಮನಸೆಳೆಯಿತು. ಈ ಅಭ್ಯಾಸದ ಅವಧಿಯಲ್ಲಿ ಭಾರತೀಯ ವಾಯುಪಡೆ, ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆಯ ಸದಸ್ಯರ ಕವಾಯತು ಕುತೂಹಲದ ಕೇಂದ್ರಬಿಂದುವಾಯಿತು.
ಅಗಸ್ಟ್15ರ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ರಾಷ್ಟ್ರ ರಾಜಧಾನಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಈ ವರ್ಷ, ಭಾರತವು ತನ್ನ 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಆಗಸ್ಟ್15ರ ವರ್ಣರಂಜಿತ ಸಮಾರಂಭವನ್ನು ಯಶಸ್ವಿಗೊಳಿಸುವ ಸಂಬಂಧ ಭಾನುವಾರ ಬೆಳಿಗ್ಗೆ ಪೂರ್ವಾಭ್ಯಾಸ ನಡೆಸಲಾಯಿತು. ಕೆಂಪು ಕೋಟೆಯಲ್ಲಿ ಭಾರತೀಯ ವಾಯುಪಡೆ, ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ಸಿಂಕ್ರೊನೈಸ್ಡ್ ಮೆರವಣಿಗೆಯನ್ನು ಪ್ರದರ್ಶಿಸಿತು.
#WATCH | Full dress rehearsal of different armed forces underway at Red Fort in Delhi, ahead of Independence Day. pic.twitter.com/KWDevSb5nq
— ANI (@ANI) August 13, 2023