ಶ್ರೀಹರಿಕೋಟ: ಮಾನವಸಹಿತ ಗಗನಯಾನದಲ್ಲೂ ಭಾರತ ಯಶೋಗಾಥೆಗೆ ಮುನ್ನುಡಿ ಬರೆದಿದೆ. ಮಾನವಸಹಿತ ಗಗನಯಾನದ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿದ್ದು ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.
After the successful launch of the Chandrayaan-3, our nation is ready to take its next giant stride in the realm of space.
Today the @isro launched #Gaganyaan's TV-D1 Test Flight into space scripting another remarkable space odyssey. My heartfelt congratulations to our… pic.twitter.com/X2rfHWX9t8
— Amit Shah (Modi Ka Parivar) (@AmitShah) October 21, 2023
ಇಂದು ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ವಾಹಕದ ಉಡಾವಣೆ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋ ಹೇಳಿದೆ. ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತ ರಾಕೆಟನ್ನು ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಗಿತ್ತು. ರಾಕೆಟ್ನಿಂದ ಬೇರ್ಪಟ್ಟು ಕ್ರ್ಯೂ ಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ಮಾಡೆಲ್ಗಳು ಪ್ಯಾರಚೂಟ್ ಮೂಲಕ ಯಶಸ್ವಿಯಾಗಿ ಭೂಮಿಗೆ ಇಳಿದಿವೆ.
#WATCH | Gaganyaan Mission: After the successful touch down of the crew escape module, ISRO chief S Somanath congratulates scientists pic.twitter.com/YQp6FZWXec
— ANI (@ANI) October 21, 2023
ಈ ಬಗ್ಗೆ ಪ್ರತಿಯಿಸಿರುವ ಇಸ್ರೋ ಮುಖ್ಯಸ್ಥ ಸೋಮನಾಥ್, ನೌಕೆ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
#WATCH | Sriharikota: ISRO Chief S Somanath says, "I am very happy to announce the successful accomplishment of the TV-D1 mission. The purpose of this mission was to demonstrate the crew escape system for the Gaganyaan program through a test vehicle demonstration in which the… pic.twitter.com/P34IpyPeVU
— ANI (@ANI) October 21, 2023