ವಲಸೆ ಕಾರ್ಮಿಕರ ಮಾರಣಹೋಮ; ರೈಲು ಹಳಿಯಲ್ಲಿ ಮಲಗಿದ್ದ 16 ಮಂದಿ ಸಾವು

ಕೊರೋನಾ ಸಂಕಷ್ಟ ಕಾಲದಲ್ಲಿ ಒಂದೊಂದೇ ಅನಾಹುತಗಳು ನಡೆಯುತ್ತಲಿವೆ. ಗುರುವಾರ ಆಂಧ್ರಪ್ರದೇಶದ ವಿಶಾಖಪಟ್ಟಣ ಬಳಿ ವಿಷಾನಿಲ ದುರಂತ ಹತ್ತಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಆ ಸೂತಕದ ಛಾಯೆ ಸರಿಯುವ ಮುನ್ನವೇ ಔರಂಗಾಬಾದ್ ಬಳಿ, ಇಂದು ಬೆಳಿಗ್ಗೆ ಮಾತ್ತೊಮ್ಮೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಗೂಡ್ಸ್ ರೈಲು ಹರಿದು ಅದರಡಿಯಲ್ಲಿ ಸಿಲುಕಿ 16 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಭೀಕರ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಪಾಲಾಗಿದ್ದಾರೆ.

ಔರಂಗಾಬಾದ್ ಅಮೀಪದ ಪರ್ಬನಿ-ಮನ್ಮಡ್ ವಲಯದಲ್ಲಿ ಈ ದುರಂತ ಘಟಿಸಿದೆ. ಭಾರೀ ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರು ರೈಲ್ವೆ ಹಳಿಯಲ್ಲಿ ಮಲಗಿದ್ದರು. ಅದಾಗಲೇ ಗೂಡ್ಸ್ ರೈಲೊಂದು ಆ ಹಳಿ ಮೇಲೆ ಸಾಗಿದೆ. ಮೃತಪಟ್ಟವರು ಛತ್ತೀಸ್ ಗಢ ಮೂಲದ ವಲಸೆ ಕಾರ್ಮಿಕರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ..  ಭಾರತದಲ್ಲೂ ಅಮಾನವೀಯತೆ 

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅದಾಗಲೇ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವಲಸೆ ಕಾರ್ಮಿಕರು ರೈಲು ಹಳಿ ಮೇಲೆ ಯಾಕಾಗಿ ಮಲಗಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರಾದರೂ ಆಕಸ್ಮಿಕವಾಗಿ ರೈಲು ಕಾರ್ಮಿಕರ ಹರಿದು ಹೋಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಟ್ವೀಟ್’ನಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ.. ‘ಗೋಲ್ಡ್ ಮ್ಯಾನ್’ ಇನ್ನಿಲ್ಲ; ಸದ್ದಿಲ್ಲದೆ ನಡೆದ ಅಂತ್ಯಕ್ರಿಯೆ

 

Related posts