‘ಗೋಲ್ಡ್ ಮ್ಯಾನ್’ ಇನ್ನಿಲ್ಲ; ಸದ್ದಿಲ್ಲದೆ ನಡೆದ ಅಂತ್ಯಕ್ರಿಯೆ

ಮೈತುಂಬಾ ಚಿನ್ನಾಭರಣಗಳಿಂದಲೇ ಕಂಗೊಳಿಸುತ್ತಿದ್ದ ‘ಗೋಲ್ಡ್ ಮ್ಯಾನ್’ ಇನ್ನಿಲ್ಲ. ದೇಶದಲ್ಲಿ ಆಗಾಗ್ಗೆ ಸುದ್ದಿಯಾಗುತ್ತಿದ್ದ ಈ ದಿಗ್ಗಜ ಇನ್ನು ನೆನಪು ಮಾತ್ರ.

ಮಹಾರಾಷ್ಟ್ರದ ಪುಣೆಯ ಉದ್ಯಮಿ, 39 ವರ್ಷ ಹರೆಯದ ಸಾಮ್ರಾಟ್ ಮೋಜೆ಼ ‘ಚಿನ್ನದ ಮನುಷ್ಯ’ ಎಂದೇ ಗುರುತಾಗಿದ್ದರು. ಮಂಗಳವಾರ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರು ಪುಣೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ಮೈತುಂಬೆಲ್ಲಾ ಆಭರಣಗಳೇ ಇರುತ್ತಿದ್ದವು. ವಿವಿಧ ಶೈಲಿಯ ಆಭರಣ ಅವರ ಕೊರಳನ್ನಷ್ಟೇ ಏರುತ್ತಿದ್ದುದಲ್ಲ, ಕೈಗಳಲ್ಲೂ ಭಾರೀ ತೂಕದ ಚಿನ್ನದ ಕಡಗಗಳು, ಚೈನ್’ಗಳು ನೋಡುಗರ ಗಮನ ಕೇಂದ್ರೀಕರಿಸುತ್ತಿತ್ತು.

ಸುಮರು 10 ಕೆಜಿ ತೂಕದ ಬಂಗಾರದ ಆಭರಣಗಳನ್ನು ಅವರು ಧರಿಸುತ್ತಿದ್ದರು. ಬಟ್ಟೆಗಿಂತ ಆಭರಣಕ್ಕೆ ಮಹತ್ವ ನೀಡುತ್ತಿದ್ದ ಇವರು ಪಾಲ್ಗೊಂಡ ಯಾವುದೇ ಸಭೆ-ಸಮಾರಂಭಗಳಲ್ಲಿ‌ ಕುತೂಹಲದ ಕೇಂದ್ರಬಿಂದುವಾಗುತ್ತಿದ್ದರು. ಈ‌ ಆಭರಣ ಧಾರಣೆಯ ಕಾರಣದಿಂದಾಗಿಯೇ ಸಾಮ್ರಾಟ್ ಮೊಜೆ಼ ಅವರು ‘ಗೋಲ್ಡ್ ಮ್ಯಾನ್’ ಎಂದು ಖ್ಯಾತರಾಗಿದ್ದರು.

ಇದನ್ನೂ ಓದಿ.. ವಲಸೆ ಕಾರ್ಮಿಕರಿಗೆ ಇದೆಂತಾ ಶಿಕ್ಷೆ? ಕಣ್ಣಿದ್ದೂ ಕುರುಡಾಯಿತೇ ಸರ್ಕಾರ? 

ಮಹಾರಾಷ್ಟ್ರದ ಪ್ರಖ್ಯಾತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಈ ‘ಗೋಲ್ಡ್ ಮ್ಯಾನ್’ ರಾಜಕೀಯದಲ್ಲಿ‌ಗುರುತಿಸುವ ಹೆಬ್ಬಯಕೆಯನ್ನೂ ಹೊಂದಿದ್ದರೆನ್ನಲಾಗಿದೆ. ಈ ಉದ್ದೇಶದಿಂದಲೇ ಅವರು‌ ಬಹಳಷ್ಟು ಸಾಮಾಜಿಕ ಚಟುವಟಿಕೆಗಳಿಗೆ ನೆರವು ನೀಡಿ ಯುವಕರ ಗುಂಪಿನಲ್ಲಿ ಐಕಾನ್ ಎನಿಸಿಕೊಂಡಿದ್ದರು.

ಪ್ರಸ್ತುತ ಲಾಕ್‌ಡೌನ್ ಜಾರಿಯಲ್ಲಿದ್ದುದರಿಂದಾಗಿ ಗೋಲ್ಡ್‌ಮ್ಯಾನ್ ಅಂತ್ಯಕ್ರಿಯೆ ಕೆಲವೇ ಮಂದಿಯ ಸಮ್ಮುಖದಲ್ಲಿ‌ ನೆರವೇರಿದೆ.

—-

ಇದನ್ನೂ ಓದಿ..

ವಲಸೆ ಕಾರ್ಮಿಕರಿಗೆ ಇದೆಂತಾ ಶಿಕ್ಷೆ? ಕಣ್ಣಿದ್ದೂ ಕುರುಡಾಯಿತೇ ಸರ್ಕಾರ?

Related posts