ಹೆಲ್ತ್ ಬುಲೆಟಿನ್ ಸಂಚಲನ; ರಾಜ್ಯದಲ್ಲಿ ಮತ್ತೆ 34 ಮಂದಿಗೆ ಸೋಂಕು

ಕೋವಿಡ್-19 ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ ಮತ್ತೆ 34 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು ಆತಂಕ ಹೆಚ್ಚಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕರಾಳ ಸನ್ನಿವೇಶ ಮುಂದುವರಿದಿದ್ದು ಮತ್ತೆ 34 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ರಾಜ್ಯ ಸರ್ಕಾರದ ಮಾರ್ನಿಂಗ್ ಹೆಲ್ತ್ ಬುಲೆಟಿನ್ ಆತಂಕಕಾರಿ ಸೂಚನೆಯನ್ನು ನೀಡಿದೆ. ರಾಜ್ಯದಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರಿದಿದ್ದು ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವರೆಗಿನ ಸುಮಾರು 34 ಹೊಸ ಪ್ರಕರಣಗಳು ವರದಿಯಾಗಿದೆ. ಕೊರೋನಾ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ದೃಢಪಟ್ಟಿರುವ ಕೊರೋನಾ ಸೋಂಕಿನ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿವೆ . ಜೊತೆಗೆ ಬೆಂಗಳೂರಿನಲ್ಲಿ ಒಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆವೂ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ.. ನೀವು ರೆಡ್ ಝೋನ್’ನಲ್ಲಿದ್ದೀರಿ.. ಹಾಗಾದರೆ ನಿಮ್ಮ ಸ್ಥಿತಿ ಹೇಗಿರುತ್ತೆ ಗೊತ್ತಾ? 

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಬುಲೆಟಿನ್’ನಲ್ಲಿ ವರದಿ ಮಾಡಿರುವ ಕೊರೋನಾ ಸೋಂಕಿನ ಜಿಲ್ಲಾವಾರು ಅಂಕಿ ಅಂಶ ಹೀಗಿದೆ:

  • ಬೆಳಗಾವಿ ಜಿಲ್ಲೆಯಲ್ಲಿ – 17
  • ವಿಜಯಪುರ – 7 
  • ಬೆಂಗಳೂರು – 5 
  •  ಮೈಸೂರು – 3 
  • ಗದಗ್ – 1
  • ಕಲಬುರ್ಗಿ -1

ಬೆಳಗಾವಿಯಲ್ಲಿ ಸೋಂಕು ದೃಢ ಪಟ್ಟವರಲ್ಲಿ ಮಹಾರಾಷ್ಟ್ರ ಹಾಗೂ ಗೋವಾದಿಂದ ಬಂದವರೂ ಸೇರಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾದವರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ. ಇದೆ ವೇಳೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸುಮಾರು 82 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ.. ಕಿಲ್ಲರ್ ಕೊರೋನಾ ಅಟ್ಟಹಾಸ.. ಮುಂದುವರಿದ ಸಾವಿನ ಸರಣಿ.. ಬೆಂಗಳೂರು ಎಷ್ಟು ಸೇಫ್? 

 

Related posts