PIZZA ಪ್ರಿಯರೇ ಎಚ್ಚರ; ಆನ್’ಲೈನ್ ಗ್ರಾಹಕರಿಗೆ ವೈರಸ್ ಆತಂಕ; ಕ್ವಾರಂಟೈನ್ ಸಂಕಷ್ಟ

ಆನ್’ಲೈನ್ ಮೂಲಕ ಆಹಾರ ತರಿಸಿದರೆ ವೈರಸ್ ಮನೆ ಸೇರುತ್ತಾ? ಈ ರೀತಿಯ ಆತಂಕ ಇದೀಗ ಜನರನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿರೋದು ಪಿಜ್ಜಾ ಡೆಲಿವರಿ ಬಾಯ್ ಹೆಲ್ತ್ ಇಶ್ಯೂ..  

ದೆಹಲಿ: ಪಿಜ್ಜಾ ಪ್ರಿಯರೇ ಎಚ್ಚರ.. ಆನ್’ಲೈನ್’ನಲ್ಲಿ ತಿನಿಸು ತರಿಸಿಕೊಂಡರೆ ಹೆಮ್ಮಾರಿ ವೈರಸ್ ಮನೆ ಸೇರುವ ಆತಂಕವೂ ಸಾಧ್ಯ.. ಇದಕ್ಕೆ ಉದಾಹರಣೆ ಎಂಬಂತೆ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಮನೆ ಊಟ ಬೋರ್ ಅನಿಸುತ್ತೆ ಅಂತ ಆನ್ ಲೈನ್ ಮೂಲಕ ತಿನಿಸು ತರಿಸಿದಲ್ಲಿ ಆತಂಕ ಕಟ್ಟಿಟ್ಟ ಬುತ್ತಿ. ಯಾಕೆಂದರೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ ಯುವಕನೋರ್ವನಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದರಿಂದಾಗಿ ನೂರಾರು ಮಂದಿ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ದೆಹಲಿಯ ಮಾಳ್ವಿಯಾ ಎಂಬ ಪ್ರದೇಶದಲ್ಲಿ ಪಿಜ್ಜಾ ಸಂಸ್ಥೆಯ ಆನ್ಲೈನ್ ಡೆಲಿವರಿ ಸೇವಾ ನಿರತ ಯುವಕನೊಬ್ಬ ಲಾಕ್’ಡೌನ್ ಸಂದರ್ಭದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ. ಇದ್ದಕ್ಕಿದಂತೆ ಈತ ಆಸ್ಪತ್ರೆಗೆ ದಾಖಲಾಗಿದ್ದಾನೆ.  ಆತನನ್ನು ಪರೀಕ್ಷೆಗೆ ಗುರಿಪಡಿಸಿದಾಗ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತನೊಂದಿಗೆ ಕೆಲಸ ಮಾಡುತ್ತಿದ್ದ ಇತರೆ 16 ಮಂದಿಯನ್ನೂ ಕ್ವಾರಂಟೈನ್ ನಲ್ಲಿರಿಸಲಾಗಿದೆ.

ಇದನ್ನೂ ಓದಿ.. ಕೊರೋನಾ ಕರಿನೆರಳಲ್ಲಿದ್ದವರು ಈಗ ನಿರಾಳ.. ಇಲ್ಲಿ ಶಾಸಕರೇ ಹೀರೊ

ಅಷ್ಟೇ ಅಲ್ಲ ಈ ಯುವಕ ದೆಹಲಿಯ ವಿವಿಧ ಭಾಗಗಳಲ್ಲಿ 70ಕ್ಕೂ ಹೆಚ್ಚು ಮನೆಗಳಿಗೆ ಪಿಜ್ಜಾ ಡೆಲಿವರಿ ಮಾಡಿದ್ದಾನೆನ್ನಲಾಗಿದೆ. ಹಾಗಾಗಿ ಆ ಎಲ್ಲಾ ಗ್ರಾಹಕ ಕುಟುಂಬಗಳೂ ಇದೀಗ ಕ್ವಾರಂಟೈನ್’ಗೊಳಗಾಗುವ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆಲೈನ್ ಸೇವೆ ಎಷ್ಟು ಸುರಕ್ಷಿತ? 

ಈ ನಡುವೆ ಆಲೈನ್ ಸೇವೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಮೂಡಿದೆ. ಇದು ದೆಹಲಿಯಲ್ಲಿನ ಪ್ರಸಂಗವಾಗಿದ್ದರೂ ಎಲ್ಲಾ ಕಡೆ ಈ ರೀತಿಯ ಪ್ರಕ್ರಿಯೆ ಸಂದರ್ಭಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಿದ್ದಾರೆ ತಜ್ಞರು. ಹಾಗಾಗಿ ಅಗತ್ಯ ಇರುವಷ್ಟು ವಿಷಯಗಳಿಗಷ್ಟೇ ಆನ್’ಲೈನ್ ವಿಚಾರಕ್ಕೆ ಹೋಗುವುದು ಸೂಕ್ತ ಎಂಬ ಜಾಗೃತಿ ಮಾಹಿತಿಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ.. ನೀವು ರೆಡ್ ಝೋನ್’ನಲ್ಲಿದ್ದೀರಿ.. ನಿಮ್ಮ ಸ್ಥಿತಿ ಹೇಗಿರುತ್ತೆ ಗೊತ್ತಾ? 

 

Related posts