ಬೆಂಗಳೂರಿನಲ್ಲಿ ಹಿಟ್​ & ರನ್​; ಮೂವರು GKVK ವಿದ್ಯಾರ್ಥಿಗಳು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿಟ್​ & ರನ್​ಗೆ ಮೂವರು ಬಲಿಯಾಗಿದ್ದಾರೆ. ಚಿಕ್ಕಜಾಲ ಬಳಿಯ ಕೆಂಪೇಗೌಡ ಏರ್​​ಪೋರ್ಟ್​ ರಸ್ತೆಯಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಮೂವರು ಯುವಕರು ಬೈಕ್​ನಲ್ಲಿ ಲಾಂಗ್​ ಡ್ರೈವ್​ ಹೋಗಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದಲ್ಲಿ ರೋಹಿತ್, ​​ಸುಚಿತ್ಹ ಮತ್ತು ಹರ್ಷ ಎಂಬವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, GKVKಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಜಾಲ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related posts