ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಕರಾಳ ದಿನ. ಮತ್ತೊಮ್ಮೆ ಶತಕದ ವರದಿಯ ತಲ್ಲಣ ಸೃಷ್ಟಿಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ನೂರು ಹೊಸ ಕೋವಿಡ್-19 ಪಾಸಿಟಿವ್ ಕೇಸ್ಗಳು ಪತ್ತೆಯಾಗಿರುವುದನ್ನು ಬಹಿರಂಗಪಡಿಸಿದೆ. ಸೋಮವಾರ ಸಂಜೆ ನಂತರ ಮಂಗಳವಾರ ಮಧ್ಯಾಹ್ನದವರೆಗೆ ರಾಜ್ಯದ ವಿವಿಧೆಡೆ ನೂರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ, 2,282ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.
◼️ ಕೋಲಾರದಲ್ಲಿ 2 ಹೊಸ ಕೇಸ್
◼️ ಯಾದಗಿರಿಯಲ್ಲಿ 14 ಹೊಸ ಕೇಸ್
◼️ ದಕ್ಷಿಣ ಕನ್ನಡದಲ್ಲಿ 3 ಹೊಸ ಕೇಸ್
◼ ಬಾಗಲಕೋಟೆಯಲ್ಲಿ 1 ಹೊಸ ಕೇಸ್
◼️ ವಿಜಯಪುರದಲ್ಲಿ 5 ಹೊಸ ಕೇಸ್
◼️ ದಾವಣಗೆರೆಯಲ್ಲಿ 11 ಹೊಸ ಕೇಸ್
◼️ ಬೀದರ್ನಲ್ಲಿ 10 ಹೊಸ ಕೇಸ್
◼️ ಹಾಸನದಲ್ಲಿ 13 ಹೊಸ ಕೇಸ್
◼️ ಉಡುಪಿಯಲ್ಲಿ 3 ಹೊಸ ಕೇಸ್
◼️ ಚಿಕ್ಕಬಳ್ಳಾಪುರದಲ್ಲಿ 1 ಹೊಸ ಕೇಸ್
◼️ ಚಿತ್ರದುರ್ಗದಲ್ಲಿ 19 ಹೊಸ ಕೇಸ್
◼️ ಕೊಪ್ಫಳದಲ್ಲಿ 1 ಹೊಸ ಕೇಸ್
◼️ ಬಳ್ಳಾರಿಯಲ್ಲಿ 1 ಹೊಸ ಕೇಸ್
◼️ ಬೆಂಗಳೂರು ನಗರದಲ್ಲಿ 2 ಹೊಸ ಕೇಸ್
◼️ ಬೆಳಗಾವಿಯಲ್ಲಿ 11 ಹೊಸ ಕೇಸ್