ಕೊರೋನಾ ಮರಣ ಮೃದಂಗ: ಮುಂಬೈನಲ್ಲಿ ಒಂದೇ ದಿನ 60 ಬಲಿ

ಮುಂಬೈ: ದೇಶಾದ್ಯಂತ ಕೊರೋನಾ ವೈರಸ್ ಮರಣಮೃದಂಗ ಭಾರಿಸುತ್ತಿದ್ದು ಮಹಾರಾಷ್ಟ್ರದಲ್ಲಂತೂ ಜನರನ್ನು ಹೈರಾಣಾಗಿಸಿದೆ. ಸೋಮವಾರ ಮಹಾರಾಷ್ಟ್ರದಲ್ಲಿ 60 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಬೆಳವಣಿಗೆಯಿಂದಾಗಿ ಇಡೀ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.

ನಿನ್ನೆ ದೇಶಾದ್ಯಂತ 146 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರದ್ದೇ ಹೆಚ್ಚು ಸಂಖ್ಯೆ. ಈ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ  ಸಂಖ್ಯೆ 4,167ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 1,695ಕ್ಕೆ ಏರಿಕೆಯಾಗಿದೆ.

◼️ಮಹಾರಾಷ್ಟ್ರದಲ್ಲಿ ಒಟ್ಟು 1,695 ಮಂದಿ ಸಾವು
◼️ಗುಜರಾತ್‌ನಲ್ಲಿ ಒಟ್ಟು 888 ಮಂದಿ ಸಾವು
◼️ಮಧ್ಯಪ್ರದೇಶದಲ್ಲಿ 300 ಮಂದಿ ಸಾವು
◼️ಪ.ಬಂಗಾಳದಲ್ಲಿ 278 ಮಂದಿ ಬಲಿ

◼️ದೆಹಲಿಯಲ್ಲಿ 276 ಮಂದಿ ಬಲಿ
◼️ರಾಜಸ್ಥಾನದಲ್ಲಿ 167 ಮಂದಿ ಬಲಿ
◼️ಉತ್ತರಪ್ರದೇಶದಲ್ಲಿ 165 ಮಂದಿ ಸಾವು
◼️ತಮಿಳುನಾಡಿನಲ್ಲಿ 118 ಮಂದಿ ಬಲಿ
◼️ಅಂಧ್ರಪ್ರದೇಶ, ತೆಲಂಗಾಣದಲ್ಲಿ 112 ಮಂದಿ ಸಾವು
◼️ಕರ್ನಾಟಕದಲ್ಲಿ 44 ಮಂದಿ ಸಾವು
◼️ಪಂಜಾಬ್ ನಲ್ಲಿ 40 ಮಂದಿ ಸಾವು
◼️ಜಮ್ಮು-ಕಾಶ್ಮೀರದಲ್ಲಿ 23 ಮಂದಿ ಬಲಿ
◼️ಹರ್ಯಾಣದಲ್ಲಿ 16 ಮಂದಿ ಸಾವು
ಬಿಹಾರದಲ್ಲಿ 13 ಮಂದಿ ಸಾವು
◼️ಒಡಿಶಾದಲ್ಲಿ 7 ಮಂದಿ ಬಲಿ
ಕೇರಳದಲ್ಲಿ ಐವರು ಬಲಿ
◼️ಹಿಮಾಚಲ ಐವರ ಸಾವು
◼️ಜಾರ್ಖಂಡ್‌ನಲ್ಲಿ ನಾಲವರು ಬಲಿ
ಅಸ್ಸಾಂನಲ್ಲಿ ನಾಲ್ವರು ಸಾವು
◼️ಚಂಡೀಘಡದಲ್ಲಿ ಮೂವರು
◼️ಉತ್ತರಾಖಂಡದಲ್ಲಿ  ಮೂವರು ಸಾವು
◼️ಮೇಘಾಲಯದಲ್ಲಿ ಒಬ್ಬರು ಬಲಿ

Related posts