ಅಮೆರಿಕ ದ್ವಿಗುಣ ಸುಂಕ: ಭಾರತ ತೀವ್ರ ಅಸಮಾಧಾನ

ನವದೆಹಲಿ: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಅಮೆರಿಕಕ್ಕೆ ಸಾಗುವ ವಸ್ತುಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಕ್ರಮಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಆದೇಶಕ್ಕೆ ಸಹಿ ಹಾಕಿದ್ದು, ರಷ್ಯಾ ಸಂಬಂಧಿತ ನೀತಿಗಳ ಪ್ರತಿಕ್ರಿಯೆಯಾಗಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಭಾರತಕ್ಕೆ ಈಗಾಗಲೇ ಶೇ.25ರಷ್ಟು ಪ್ರತಿ ತೆರಿಗೆ ವಿಧಿಸಲಾಗಿತ್ತು.

ಅಮೇರಿಕಾದ ಹಠಮಾರಿ ಧೋರಣೆಯನ್ನು ಭಾರತ ವಿದೇಶಾಂಗ ಸಚಿವಾಲಯ ಖಂಡಿಸಿದೆ. ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿ, ಅಮೆರಿಕ ನಿರ್ಧಾರ ಹಿನ್ನೆಲೆಯಲ್ಲಿ ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಂದೇಶ ರವಾನಿಸಿದ್ದಾರೆ.

“ಈ ಕ್ರಮಗಳು ಅನ್ಯಾಯಮಯ ಹಾಗೂ ಅಸಮಂಜಸ. ಇಂತಹ ದಂಡಾತ್ಮಕ ನೀತಿಗಳು ಜಾಗತಿಕ ವ್ಯಾಪಾರ ಧೋರಣೆಗೆ ವಿರುದ್ಧ” ಎಂದು ಭಾರತ ಅಭಿಪ್ರಾಯ ವ್ಯಕ್ತಪಡಿಸಿದೆ.

Related posts