ಕರಾಚಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ಪ್ರೇರಿತ ಉಗ್ರರ ವಿರುದ್ದದ ಭಾರತದ ‘ಆಪರೇಷನ್ ಸಿಂಧೂರ್’ ಬಿರುಸುಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಪಡೆಗಳ ನಡುವೆ ಸಮರ ಸನ್ನಿವೇಶ ಸೃಷ್ಟಿಯಾಗಿದ್ದು, ಭಾರತದ ಮೇಲೆ ದಾಳಿ ನಡೆಸುವ ಗುರುವಾರ ನಡೆದ ಕಾರ್ಯಾಚರಣೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
🚨BIG :
India’s Sudarshan Chakra S-400 in action in Jalandhar 🔥#IndiaPakistanWar #Jalandhar #S400 pic.twitter.com/2wc7yKksBD
— Amitabh Chaudhary (@MithilaWaala) May 8, 2025
ಭಾರತೀಯ ಸೇನಾ ನೆಲೆಯನ್ನೇ ಪಾಕಿಸ್ತಾನ ಗುರಿಯಾಗಿಸಿ ದಾಳಿ ಮಾಡಲು ಮುಂದಾಗಿದೆ. ಆದರೆ ಕ್ಷಿಪ್ರ ಪ್ರತಿರೋಧ ತಾಳಿದ ಭಾರತವು ಪಾಕ್ ಸೇನೆಯ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಭಾರತಕ್ಕೆ ಪಾಕಿಸ್ತಾನ ಸೇನೆ ಲಗ್ಗೆ ಹಾಕಲು ಮುಂದಾಗುತ್ತಿದ್ದಂತೆಯೇ, ಭಾರತ ಸೇನೆ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದೆ. ಇಸ್ಲಾಮಾಬಾದ್, ಕರಾಚಿ, ಲಾಹೋರ್ ನಗರಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಅಕ್ಷರಶಃ ಬೆಚ್ಚಿ ಬಿದ್ದಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್ ನಗರಗಳ ಮೇಲೆ ದಾಳಿ ನಡೆಸಿರುವ ಭಾರತ, ನೌಕಾಪಡೆಯನ್ನೂ ಅಖಾಡಕ್ಕಿಸಿ ತನ್ನ ಶಕ್ತಿಯನ್ನು ಜಗತ್ತಿಗೆ ಅನಾವರಣ ಮಾಡಿದೆ. ಐಎನ್‌ಎಸ್ ವಿಕ್ರಾಂತ್ ಮೂಲಕ ಪಾಕಿಸ್ತಾನದ ಕರಾಚಿ ಬಂದರನ್ನು ಭಾರತ ಸರ್ವನಾಶ ಮಾಡಿದೆ.