ಇಂದಿರಾಗೆ ರಾಜಕೀಯ ಪುನರ್ಜನ್ಮ ನೀಡಿದ್ದ ನಾಯಕ ಬಿಜೆಪಿ ಸೇರಿದ್ದೇ ಅಚ್ಚರಿ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡ ಅವರು ವಿಧಿವಶರಾಗಿದ್ದಾರೆ. ಡಿ.ಬಿ.ಚಂದ್ರೇಗೌಡ ಅವರ ನಿಧನದಿಂದಾಗಿ ಬಿಜೆಪಿ ಮಾತ್ರವಲ್ಲ ರಾಜಕೀಯದಲ್ಲಿ ಸೂತಕದ ಛಾಯೆ ಆವರಿಸಿದೆ.

ಕಾಂಗ್ರೆಸ್ ಕಟ್ಟಾಳು ಆಗಿದ್ದ ಡಿ.ಬಿ.ಚಂದ್ರೇಗೌಡ ಅವರು ಶಾಸಕರಾಗಿ ಸಂಸದರಾಗಿ, ಸಚಿವರಾಗಿ, ಸ್ಪೀಕರ್ ಆಗಿ ರಾಜಕೀಯದಲ್ಲಿ ಪ್ರಬಲ ನಾಯಕರೆನಿಸಿದ್ದರು. ವಕೀಲರಾಗಿದ್ದ ಅವರು ಕಾನೂನು ಸಚಿವರಾಗಿ ಕೈಗೊಂಡ ತೀರ್ಮಾನಗಳೂ ಮೈಲಿಗಲ್ಲು.

ಚಿಕ್ಕಮಗಳೂರಿನ ಮೂಡಿಗೆರೆ ಡಿ.ಬಿ.ಚಂದ್ರೇಗೌಡ ಅವರ ತವರು ಕ್ಷೇತ್ರ ಎಂಬಂತಿದ್ದರೂ ಬದಲಾದ ನಿರ್ಧಾರವೊಂದರಲ್ಲಿ ದಶಕದ ಹಿಂದೆ ಅವರು ಬಿಜೆಪಿ ಸೇರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾದರು. ಆಗಿನಿಂದ ಬಿಜೆಪಿ ಪಾಲಿಗೆ ಡಿ.ಬಿ.ಚಂದ್ರೇಗೌಡ ಅವರು ಶಕ್ತಿಯಂತಿದ್ದರು.

ಅದಕ್ಕೂ ಮುನ್ನ ಕಾಂಗ್ರೆಸ್ ಸೇನಾನಿಯಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ಒಂದೊಮ್ಮೆ ಕಾಂಗ್ರೆಸ್ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಮುಖಂಡ ಎಂದೇ ಬಿಂಬಿತರಾದವರು. ಇಂದಿರಾ ಗಾಂಧಿಯವರು 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಯಾಸಲು ಬಯಸಿದಾಗ ಅವರಿಗಾಗಿ ತಾನು ಪ್ರತಿನಿಧಿಸುತ್ತಿದ್ದ ಸಂಸದ ಸ್ಥಾನವನ್ನು ತೊರೆದು ಇಂದಿರ ಗಾಂಧಿ ಗೆ ಚಿಕ್ಕಮಗಳೂರಿನಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು. ಅಂತಹಾ ಮನಸ್ಥಿತಿಯ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇ ಅಚ್ಚರಿ.

Related posts