ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯ ವತಿಯಿಂದ ಅಕ್ಟೊಬರ್ 12, ಭಾನುವಾರದಂದು ನಡೆಯಲಿರುವ ಬ್ರಹ್ಮಶ್ರೀ ನಿಲಯ ಉದ್ಘಾಟನೆ ಹಿನ್ನೆಲೆಯಲ್ಲಿ, ಪ್ರತಿಭಾವಂತ ಸಾಧಕರಿಗೆ ಸನ್ಮಾನ, ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸಲಾಗುತ್ತದೆ. ಈ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ 31 ರಂದು ಬಿಡುಗಡೆ ಮಾಡಲಾಯಿತು.
ಮಂಗಳೂರು ಸಮೀಪದ ಹೂ ಹಾಕುವ ಕಲ್ಲು ಸನ್ನಿಧಿಯಲ್ಲಿ ಸಮಾರಂಭ ನೆರವೇರಿತು. ಸುಮಾರು 13 ವರ್ಷಗಳಿಂದ ಟಾರ್ಪಲ್ ಇನ್ ಹೊದಿಕೆಯ ಮನೆಯಲ್ಲಿ ಜೀವನ ನಡೆಸುತ್ತಿದ್ದ ಕಡುಕುಟುಂಬದ ಸಂಸಾರಕ್ಕೆ ಬಿಲ್ಲವ ವೇದಿಕೆ ಒಂದು ಸುಸಜ್ಜಿತ ಮನೆಯನ್ನು ನಿರ್ಮಾಣ ಮಾಡಿ ಕೊಟ್ಟಿತ್ತು. ಈ ಮನೆಯ ಹಸ್ತಾಂತರ ಕಾರ್ಯಕ್ರಮ ಕೂಡಾ12.10.2025 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದಂತಹ ಬಿಕೆ ಹರಿಪ್ರಸಾದ್, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಸುನಿಲ್ ಕುಮಾರ್ ಕಾರ್ಕಳ ಹಾಗೂ ವಿಧಾನಸಭಾಧ್ಯಕ್ಷ ಯುಟಿ ಖಾದರ್, ಶ್ರೀ ಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಜಯ ರಾಜ ಕುದ್ರೋಳಿ, ಕೋಶಾಧಿಕಾರಿ ಪದ್ಮರಾಜ್ ಆರ್., ಬಿಜೆಪಿಯ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮ ಮುಗಿದ ನಂತರ ಶ್ರೀ ಕ್ಷೇತ್ರ ಕಣಂತೂರಿನ ಆನುವಂಶಿಕ ಮುಕ್ತಸರರಾದ ಪದ್ಮನಾಭ ರೈ, ಶ್ರೀ ಕ್ಷೇತ್ರ ಕೂಟತಜೆಯ ಆಡಳಿತ ಮುಕ್ತೇಸರ ಭರತ್ ನಾಯ್ಕ್ ನಚ್ಚಗುತ್ತು, ಉಳ್ಳಾಲ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ ಟಿ ಸುವರ್ಣ ರವರ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪದ್ಮನಾಭ ರೈ, ಇಂತಹ ಸಮಾಜ ಸೇವೆ ಸೇವೆಯನ್ನು ಬಿಲ್ಲವ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಇಂತಹ ಕೆಲಸಗಳು ಇನ್ನಷ್ಟು ಹೆಚ್ಚು ಇವರಿಗೆ ಮಾಡುವ ಶಕ್ತಿಯನ್ನು ಆ ದೇವರು ಒದಗಿಸಲಿ ಎಂದು ಹಾರೈಸಿದರು.
ಶ್ರೀ ಕ್ಷೇತ್ರ ಕೂಟತಜೆಯ ಆಡಳಿತ ಮುಕ್ತೇಸರ ಭರತ್ ನಾಯ್ಕ್ ನಚ್ಚಗುತ್ತು ಮಾತನಾಡಿ ಬಿಲ್ಲವ ಸಮುದಾಯದ ಕೆಲಸ ಅತ್ಯುತ್ತಮವಾಗಿದೆ ಇಂತಹ ಸಂಘಟನೆಗಳು ಈ ರೀತಿ ಸಮಾಜಸೇವೆ ಮಾಡಿದಲ್ಲಿ ಹೊಸ ಮನೆಯ ಕನಸು ಕಂಡ ಅದೆಷ್ಟೋ ಕಡುಬಡತನದ ಕುಟುಂಬಗಳಿಗೆ ನೆರವಾಗುವುದು ಎಂದರು.
ಸುವರ್ಣ ರವರು ಮಾತನಾಡಿ ವೇದಿಕೆ ಸ್ಥಾಪನೆಯಾದಗಿನಿಂದ ಇಲ್ಲಿಯವರೆಗೆ ಒಳ್ಳೊಳ್ಳೆಯ ಸಮಾಜ ಸೇವೆಗಳನ್ನು ಮಾಡುತ್ತಿದೆ. ಬಡತನದ ಕುಟುಂಬದಲ್ಲಿ ಯಾರಾದರೂ ಮೃತರಾದರೆ ಅವರಿಗೆ ಸಹಾಯ ಹಸ್ತ ನೀಡುವುದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡುವುದು, ಹಾಗೂ ಇನ್ನಿತರ ಸಮಾಜ ಸೇವೆ ಮಾಡುತ್ತಿರುವುದು ಇಡೀ ಬಿಲ್ಲವಾ ಸಮುದಾಯಕ್ಕೆ ಒಂದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಉಪಾಧ್ಯಕ್ಷ ದಿವಾಕರ್ ಪೂಜಾರಿ ಬಾಳಿಪುಣಿ, ಕಾರ್ಯಧ್ಯಕ್ಷ ಬೇಬಿ ರಾಜ್ ಮಾಡಿಪು, ನಿಕಟಪೂರ್ವ ಅಧ್ಯಕ್ಷರಾದ ಯೋಗೀಶ್ ಬೋಳೂರು, ಪ್ರಧಾನ ಕಾರ್ಯದರ್ಶಿಗಳಾದ ವರುಣ್ ನವಗ್ರಾಮ ಕೋಶಾಧಿಕಾರಿಯವರಾದ ಕಿರಣ್ ಕೂಟತಜೆ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.