ಗಾಜಾ: ಮಧ್ಯ ಪ್ರಾಚ್ಯಾದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ವಿವಿಧ ರಾಷ್ಟ್ರಗಳ ಪಾಲಿಗೂ ಕಹಿ ಅನುಭವ. ಈ ನಡುವೆ ಹಮಾಸ್ ಕಪಿ ಮುಷ್ಟಿಯಲ್ಲಿ ಒತ್ತೆಯಾಳುಗಳಾಗಿದ್ದ 24 ಮಂದಿಯನ್ನು ಬಂಡುಕೋರ ಪಡೆ ಬಿಡುಗಡೆ ಮಾಡಿದೆ.
13 ಇಸ್ರೇಲಿಗಳು ಸೇರಿದಂತೆ ಗಾಜಾದಲ್ಲಿ ವಾರಗಳ ಕಾಲ ಒತ್ತೆಯಾಳುಗಳಾಗಿದ್ದ ಜನರ ಗುಂಪನ್ನು ಹಮಾಸ್ ಶುಕ್ರವಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಕದನ ವಿರಾಮ ಒಪ್ಪಂದದಡಿ ಇಸ್ರೇಲ್ ಜೊತೆ ಪ್ಯಾಲೆಸ್ತೀನ್ ಕೈದಿಗಳ ವಿನಿಮಯದ ಮೊದಲ ಹಂತ ಇದಾಗಿದೆ ಎಂದು ಹೇಳಲಾಗುತ್ತಿದೆ.
ಯುದ್ಧದ ಸಂದರ್ಭದಲ್ಲಿ ಅಪಹರಣಕ್ಕೊಳಗಾಗಿದ್ದ 12 ಥಾಯ್ ಪ್ರಜೆಗಳನ್ನೂ ಬಿಡುಗಡೆ ಮಾಡಲಾಗಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.