ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ‘ಸೂರ್ಯ’ನತ್ತ ಚಿತ್ತ; ಸೆಪ್ಟೆಂಬರ್ 2ರಂದು ‘ಆದಿತ್ಯಾ ಎಲ್ 1’ ಉಪಗ್ರಹವನ್ನು ಉಡಾವಣೆ

ಬೆಂಗಳೂರು: ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಭಾರತ ಇದೀಗ ಸೂರ್ಯನತ್ತ ಮುಖ ಮಾಡಿದೆ. ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದು ಸೂರ್ಯನತ್ತ ಹೆಜ್ಜೆ ಇಡಲು ಸಿದ್ಧವಾಗಿದೆ.

ಕುತೂಹಲಕಾರಿ ತೀರ್ಮಾನವೊಂದರಲ್ಲಿ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆ ಉಡಾವಣೆಗೆ ಇಸ್ರೋ ಮುಹೂರ್ತನಿಗದಿ ಮಾಡಿದೆ. ಸೆಪ್ಟೆಂಬರ್ 2 ಶನಿವಾರ ಬೆಳಗ್ಗೆ 11:50ಕ್ಕೆ PSLV-C57 ಉಡಾವಣಾ ನೌಕೆ ಮೂಲಕ ‘ಆದಿತ್ಯಾ ಎಲ್ 1’ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಪ್ರಕಟಿಸಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಗಗನನೌಕೆಯನ್ನು ಸೆಪ್ಟೆಂಬರ್ 2 ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ. ಈ ಕುರಿತಂತೆ ಇಸ್ರೋ ಮಾಡಿರುವ ಟ್ವೀಟ್ ದೇಶದ ಜನರ ಕುತೂಹಲವನ್ನು ಹೆಚ್ಚಿಸಿದೆ.

 

Related posts