ಕುತೂಹಲ ಹೆಚ್ಚಿಸಿದ ‘ಕಾಂತಾರ ಚಾಪ್ಟರ್-1″; ಒಂದೆಡೆ ಮೂಹೂರ್ತ, ಇನ್ನೊಂದೆಡೆ ಟೀಸರ್ ಬಿಡುಗಡೆ.‌

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ‘ಕಾಂತಾರ’ ಸಿನಿಮಾದ ಎರಡನೇ ಆವೃತ್ತಿ ಸ್ಯದಲ್ಲೇ ಬರಲಿದೆ. ನಿರೀಕ್ಷೆಯಂತೆಯೇ ಮುಂದೆ ಬರುತ್ತಿರುವುದು ‘ಕಾಂತಾರ ಚಾಪ್ಟರ್ 1″.

ಈ ಕುರಿತಂತೆ ಹೊಂಬಾಳೆ ಫಿಲಮ್ಸ್ ಮಾಹಿತಿ ಹಂಚಿಕೊಂಡಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಅಂದರೆ ಎರಡನೇ ಭಾಗದ ಫಸ್ಟ್‌ ಲುಕ್‌ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಗಿದೆ.

ಈ ಹೊಸ ಸಿನಿಮಾದ ಮುಹೂರ್ತ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ನೆರವೇರಿದೆ. ಇದೇ ವೇಳೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಟೀಸರ್ ಬಿಡುಗಡೆಯಾಗಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು ಜನರ ಕುತೂಹಲವನ್ನು ಹೆಚ್ಚಿಸಿದೆ.

Related posts