‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್…’ ಕರ್ನಾಟಕದಲ್ಲೂ ‘ಗುಜರಾತ್ ಸೂತ್ರ’ಕ್ಕೆ ಬಿಜೆಪಿ ತಯಾರಿ? ಕಮಲ ಪಾಳಯದಲ್ಲಿ ಗಲಿಬಿಲಿ

 

ಬೆಳಗಾವಿ: ಗುಜರಾತ್ ಚುನಾವಣೆ ನಂತರ ಇದೀಗ ಕರ್ನಾಟಕ ರಾಜ್ಯದ ವಿಚಾರದಲ್ಲೂ ಬಿಜೆಪಿ ಹೈಕಮಾಂಡ್ ವಿಶೇಷ ಪ್ರಯೋಗಕ್ಕೆ ಚಿಂತನೆ ನಡೆಸಿದೆ. ಈವರೆಗೂ ಕಾಂಗ್ರೆಸ್ ಹಾಗೂ ಇತರ ಎದುರಾಳಿ ಪಕ್ಷಗಳ ಕುಟುಂಬ ರಾಜಕಾರಣ ಬಗ್ಗೆ ಟೀಕಿಸುತ್ತಿರುವ ಬಿಜೆಪಿ ಇದೀಗ ತನ್ನೊಳಗೇ ಸರ್ಜರಿಗೆ ತಯಾರಿ ನಡೆಸಿದೆ.

ಬಿಜೆಪಿಯ ಈ ಅಚ್ಚರಿಯ ನಡೆ ಬಗ್ಗೆ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಗುಜರಾತ್‌ನಂತೆಯೇ ಕರ್ನಾಟಕದಲ್ಲೂ ಈ ಬಾರಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಸೂತ್ರವನ್ನು ಅನುಸರಿಸಲಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. 

ಬಿಜೆಪಿಯೊಳಗಿನ ಕಸರತ್ತಿನ ಕುರಿತು ಸುದ್ದಿಗಾರರ ಜತೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಶಾಸಕ ಯತ್ನಾಳ್, ಗುಜರಾತ್‌‌ನಲ್ಲಿ ಹೊಸಬರಿಗೆ ಟಿಕೆಟ್ ನೀಡಿರುವ ಪ್ರಯೋಗ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲೇ ಕರ್ನಾಟಕದಲ್ಲೂ ಮುಂಬರುವ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂದಿದ್ದಾರೆ. ಅವರ ಈ ಹೇಳಿಕೆ ಹಲವು ನಾಯಕರ ಹುಬ್ಬೇರುವಂತೆ ಮಾಡಿದೆ.

ಈ ಬಾರಿ ಬಹಳಷ್ಟು ಜನರನ್ನು ಬದಲಾವಣೆ ಮಾಡಲಾಗುತ್ತದೆ. ಕ್ರಮಿನಲ್ ಅಥವಾ ಗಂಭೀರ ಆರೋಪ ಎದುರಿಸುವವರಿಗೆ ಟಿಕೆಟ್ ಸಿಗುವುದೂ ಕಷ್ಟ ಎಂದವರು ಹೇಳಿದರು.

Related posts