ದೆಹಲಿ: ಚೀನಾದಲ್ಲಿ ಸೃಷ್ಟಿಯಾಗಿರುವ ಕೊರೋನಾ ವೈರಾಣು ವಿಶ್ವ ಪರ್ಯಟನೆ ಕೈಗೊಂಡು ಭೀತಿಯ ಕಾರ್ಮೋಡ ಆವರಿಸುವಂತೆ ಮಾಡಿದೆ. ಜಗತ್ತಿನೆಲ್ಲೆಡೆ ಮಾರಣಹೋಮದ ಸ್ಥಿತಿ ಕಂಡುಬರುತ್ತಿದ್ದು ಈ ಕಿಲ್ಲರ್ ವೈರಸ್ ವಿವಿಧ ರಾಷ್ಟ್ರಗಳಲ್ಲಿ ಸುಮಾರು 62 ಲಕ್ಷ ದಾಟಿದ್ದು 3.72 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.
- ವಿಶ್ವಾದ್ಯಂತ 62,08,200 ಜನರಿಗೆ ಸೋಂಕು
- ಜಗತ್ತಿನಾದ್ಯಂತ 3,72,052 ಜನರ ಸಾವು
ಕೊರೋನಾ ಸೋಂಕು ದಿನೇದಿನೇ ಹೆಚ್ಚುತ್ತಲೇ ಇದ್ದು ಅಮೆರಿಕಾದಲ್ಲಿ ಅತೀ ಹೆಚ್ಚುಮಂದಿ ಸೋಂಕಿತರಿದ್ದಾರೆ. ಭಾರತದಲ್ಲೂ ಅತೀ ವೇಗದಲ್ಲಿ ಕೋವಿಡ್-19 ಸೋಂಕು ಹಬ್ಬಿದ್ದು ಇದೀಗ ಅತೀ ಹೆಚ್ಚು ಸೋಂಕು ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನಕ್ಕೇರಿದೆ.
- ಭಾರತದಲ್ಲಿ 1,89,765 ಜನರಿಗೆ ಸೋಂಕು
- 5,390 ಕೊರೋನಾ ಸೋಂಕಿಗೆ ಬಲಿ
ಇದನ್ನೂ ಓದಿ.. ದೇವಾಲಯ, ಮಸೀದಿಗಳಲ್ಲಿ ಹೇಗಿರಬೇಕು; ಸರ್ಕಾರದಿಂದ ಮಾರ್ಗಸೂಚಿ