ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಷ್ಠಿತ ಸಾರಿಗೆ ನಿಗಮ KSRTC ಮಡಿಲಿಗೆ ಈವರೆಗೂ 300 ಪ್ರಶಸ್ತಿಗಳು ಸಿಕ್ಕಿವೆ. ಇದೀಗ ಸ್ಕಾಚ್ ಅರ್ಡರ್ ಅಫ್ ಮೆರಿಟ್ 3 ಪ್ರಶಸ್ತಿ, 1 ಸ್ಕಾಚ್ ಗವರ್ನೆಸ್ ಪ್ರಶಸ್ತಿ-2023 ಕೆಎಸ್ಸಾರ್ಟಿಸಿ ಪಾಲಿಗೆ ಒಲಿದಿದೆ.
ದೆಹಲಿ ಮೂಲದ ‘ಸ್ಕ್ವಾಚ್..’ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ
KSRTC ನಿಗಮವು ಅನುಷ್ಠಾನ ಮಾಡಿರುವ ಕಾರ್ಮಿಕ ಕಲ್ಯಾಣ ಹಾಗೂ ಸಾಮಾಜಿಕ ಉಪಯುಕ್ತತೆಯ 3 ಉಪಕ್ರಮಗಳಿಗೆ SKOCH ORDER OF MERIT ಪ್ರಶಸ್ತಿಯು ಲಭಿಸಿರುತ್ತದೆ ಹಾಗೂ ಒಂದು ಉಪಕ್ರಮವು ಸ್ಕಾಚ್ ಗವರ್ನೆಸ್ ಪ್ರಶಸ್ತಿಯನ್ನು ಸಹ ಪಡೆದಿರುತ್ತದೆ
ನಿಗಮದ ಸಿಬ್ಬಂದಿಗೆ ಜಾರಿಗೊಳಿಸಿರುವ 1 ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮಾ ಯೋಜನೆ (ಸಾರಿಗೆ ಸುರಕ್ಷಾ ವಿಮಾ ಯೋಜನೆ). ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ ಮತ್ತು ಸ್ಕಾಚ್ ಗವರ್ನೆಸ್ ಪ್ರಶಸ್ತಿ.
ವಾಹನಗಳ ಪುನಶ್ಚೇತನ ಯೋಜನೆ ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ.
ಬಿಸಿನೆಸ್ ಇಂಟಲಿಜೆಂಟ್ ಡ್ಯಾಶ್ ಬೋರ್ಡ್ – ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ.