ಊರುಗಳ ಹೆಸರಲ್ಲಿ ಸಿನಿಮಾ ಬರುತ್ತಿರುವುವು ಹೊಸದೇನಲ್ಲ. ಹಿಂದೆ ಶಿವಾಜಿ ಸುರತ್ಕಲ್, ಯಶ್ ಅಭಿನಯದ ಕೆಜಿಎಫ್, ಹೀಗೆ ಅನೇಕ ಸಿನಿಮಾಗಳು ಹಿಟ್ ಆಗಿವೆ. ಇದೀಗ ‘ಕುಂದಾಪುರ’ ಹೆಸರಲ್ಲೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಓಂ ಗುರು ಬಸ್ರೂರ್ ನಿರ್ದೇಶನದ ‘ಕುಂದಾಪುರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೈಲರ್’ಗೆ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.
‘ಕುಂದಾಪುರ’ ಚಿತ್ರದ ಟ್ರೈಲರ್ ಸಕತ್ ಸದ್ದು
