ಮಂಜೂರಾದ ಕಲಬುರಗಿ ರೈಲ್ವೆ ಡಿವಿಷನ್ ರದ್ದು? ರಾಜ್ಯಸಭೆಯಲ್ಲಿ ಜಿ.ಸಿ.ಚಂದ್ರಶೇಖರ್ ಆಕ್ರೋಶ

ದೆಹಲಿ: 8 ವರ್ಷಗಳಾದರೂ ಕಲಬುರಗಿ ರೈಲ್ವೆ ಡಿವಿಷನ್ ಕಾರ್ಯರೂಪಕ್ಕೆ ಬಂದಿಲ್ಲ. ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್ ಸಂಸದ ಜಿ.ಸಿ.ಚಂದೇರಶೇಖರ್, 2014 ರ ಕೇಂದ್ರ ಬಜೆಟ್ ನಲ್ಲಿ ಮಂಜೂರಾಗಿದ್ದರು ಸಹ ಕಾರ್ಯರೂಪಕ್ಕೆ ಬರದ ಬಗ್ಗೆ ಕೇಂದ್ರ ಸರ್ಕಾರವನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ. ಮಂಜೂರಾಗಿದ್ದ ಕಲಬುರಗಿ ರೈಲ್ವೆ ಡಿವಿಷನ್ ಕಚೇರಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದ ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಹೇಳಿಕೆಗೆ ಸಂಸದರಾದ ಜಿ.ಸಿ ಚಂದ್ರಶೇಖರ್  ಮತ್ತು ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಆಕ್ರೋಶವ್ಯಕ್ತಪಡಿಸಿದರು. ಇದಕ್ಕೆ ಮಣಿದ ಸಚಿವರು ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವುದಾಗಿ ಪಿಯೂಷ್ ಗೋಯಲ್ ಭರವಸೆ ನೀಡಿದರು.

ಇದೇ ವೇಳೆ, 151 ರೈಲ್ ಗಳನ್ನು ಖಾಸಗೀಕರಣ ಮಾಡುತ್ತಿದ್ದು ಇದಾದ ನಂತರ ಉದ್ಯೋಗದ ನೋಟಿಫಿಕೇಶನ್ ತಡೆಹಿಡಿಯಲಾಗಿದ್ದು ಇದರಿಂದ ಸಾಮಾನ್ಯಜನರಿಂದ ಉದ್ಯೋಗದ ಅವಕಾಶಗಳನ್ನು ಕಸಿಯುವಂತೆ ಆಗುವುದಿಲ್ಲವೇ ಹಾಗು ಒಂದು ಕಡೆ ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಾ ಜೆರ್ಮನ್ ಹಾಗು ಫ್ರಾನ್ಸ್ ಮೂಲದ ಖಾಸಗಿ ಕಂಪನಿಗಳು ರೈಲ್ವೆಯ ಟಾಪ್ 5 ಕಂಪನಿಗಳಾಗಿದ್ದು ಇದರ ಬಗ್ಗೆ ರೈಲ್ವೆ ಸಚಿವಾಲಯ ಏನು ಹೇಳುತ್ತದೆ ಎಂದು ಚಂದ್ರಶೇಖರ್ ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಉತ್ತರ ಸಚಿವರಿಂದ ಸಿಗದಿದ್ದಾಗ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಯಿತು.

Related posts