ಕೊರೋನಾ ಎಫ್ಫೆಕ್ಟ್; BSNL ಉಚಿತ ಸೇವೆ

ದೆಹಲಿ: ಕೊರೋನಾ ಸುದ್ದಿಗಳಿಂದ ಇಡೀ ದೇಶವೇ ತಲ್ಲಣಗೊಂಡಿದೆ. ಬಹುತೇಕ ಕಂಪೆನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಮ್ ಹೋಂ ಅವಕಾಶ ನೀಡಿದೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆ ವರ್ಕ್ ಫ್ರಮ್ ಹೋಂ ನೌಕರರ ನೆರವಿಗೆ ಧಾವಿಸಿದೆ. ಮನೆಯಿಂದಲೇ ತಮ್ಮ ಕೆಲಸ ಮಾಡಲು ಅನುಕೂಲವಾಗುವಂತೆ ಒಂದು ತಿಂಗಳ ಉಚಿತ ಕಾಲ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದಾಗಿ ಬಿಎಸ್ಸೆನ್ನೆಲ್ ಘೋಷಣೆ ಮಾಡಿದೆ.

ಲ್ಯಾಂಡ್ ಲೈನ್ ಗ್ರಾಹಕರು ಮತ್ತು ಹೊಸ ಗ್ರಾಹಕರು ಮನೆಯಿಂದಲೇ ತಮ್ಮ ಕೆಲಸ ಮಾಡಲು ಅನುಕೂಲವಾಗುವಂತೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಅದು ಹೇಳಿದೆ. ಹೊಸ ಗ್ರಾಹಕರು ಕಾಪರ್ ಕೇಬಲ್ ಆಧಾರಿತ ಸಂಪರ್ಕವನ್ನು ಪಡೆದುಕೊಂಡಲ್ಲಿ ಇನ್ ಸ್ಟಲೇಷನ್ ಶುಲ್ಕ ಪಾವತಿಸಬೇಕಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ

Related posts