ರಾಜ್ಯದಲ್ಲಿ ಕುಗ್ಗಿದ BJP ಶಕ್ತಿ..! ಕಾಂಗ್ರೆಸ್‌‌ ಸ್ಥಿತಿ ಹೇಗಿರುತ್ತೆ? JDS ಚೇತರಿಸಿಕೊಳ್ಳುತ್ತಾ?

ಬೆಂಗಳೂರು: ಲೋಲಸಭಾ ಚುನಾವಣೆಗೆ ಇನ್ನೇನು 5-6 ತಿಂಗಳುಗಳಷ್ಟೇ ಇದ್ದು ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಅದರಲ್ಲೂ ಮೋದಿ ಆಧಿಕಾರ ಯುಗವನ್ನು ಅಂತ್ಯಗೊಳಿಸಲು ಪ್ರತಿಪಕ್ಷಗಳು ಚಕ್ರವ್ಯೂಹ ರೂಪಿಸುತ್ತಿವೆ. ಈ ಸಂಬಂಧ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿದ್ದು ಮುಂಬರುವ ಲೋಕಸಭಾ ಸಮರ ತೀವ್ರ ಕುತೂಹಲ ಕೆರಳಿಸಿದೆ. ಇತ್ತ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಸರತ್ತು ಕೂಡಾ ಗಮನಸೆಳೆದಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮಗಳು ನಡೆಸುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ. ಈ ಪೈಕಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ ಅನಾವರಣ ಮಾಡಿರುವ ಫಲಿತಾಂಶ ಅನೇಕಾನೇಕ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ.

ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ  ಪ್ರಕಾರ ಈಗಲೇ ಲೋಕಸಭಾ ಚುನಾವಣೆ ನಡೆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ NDA 307 ಸ್ಥಾನಗಳನ್ನು ಗೆದ್ದು ಅಧೀಕಾರದಲ್ಲಿ ಮುದುವರಿಯಲಿದೆ. ಪ್ರತಿಪಕ್ಷಗಳ ಒಕ್ಕೂಟವಾಗಿರುವ ‘ಇಂಡಿಯಾ’ ಮೈತ್ರಿಕೂಟ 175 ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದು, ಸುಮಾರು 56 ಸ್ಥಾನಗಳು ಇತರರ ಪಾಲಾಗಲಿವೆ ಎಂಬ ಮುನ್ಸೂಚನೆ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಏನಾಗಬಹುದು?

ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ವರ್ಚಸ್ಸು ಕಡಿಮೆಯಾಗಿರುವ ಸಂಗತಿ ಈ ಸಮೀಕ್ಷೆಯಿಂದ ಗೊತ್ತಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿ ಬೆಂಬಲಿತ ಒಂದು ಸ್ವಂತಂತ್ರ ಸ್ಥಾನ (ಸುಮಲತಾ) NDA ಪಾಲಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ. ಆದರೆ ಈ ಬಾರಿಯ ಲೆಕ್ಕಾಚಾರವೇ ಬೇರೆ. ಬಿಜೆಪಿ 5-7 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳತ್ತ ಸಮೀಕ್ಷೆ ಬೊಟ್ಟು ಮಾಡಿದೆ.

ಬಿಜೆಪಿ ಈ ಬಾರಿ 18-20 ಸ್ಥಾನಗಳನ್ನಷ್ಟೇ ಗೆಲ್ಲಬಹುದೆಂದು ಸಮೀಕ್ಷೆಯಲ್ಲಿ ವ್ಯಕ್ತವಾದರೆ, ಕಾಂಗ್ರೆಸ್ ಪಕ್ಷ 03-09 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳು ಗೋಚರಿಸಿವೆ. ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ 01-02 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯ ಎಂಬ ಫಲಿತಾಂಶ ಸಿಕ್ಕಿದೆ ಎಂದು ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ ಹೇಳಿದೆ

ಲೋಕಾ ಸಮರ: ಕರ್ನಾಟಕದಲ್ಲಿ ಫಲಿತಾಶ ಹೀಗಿರಬಹುದು:

  • BJP : 18-20

  • INDIA : 03-09

  • JDS- 01-02

Related posts