ಸಾರಿಗೆ ಬಸ್ ಅವಾಂತರ; ವಿದ್ಯಾರ್ಥಿಗಳ ರೊಚ್ಚು, ಭಾರೀ ಪ್ರತಿಭಟನೆ

ಚಾಮರಾಜನಗರ :ಸಾರಿಗೆ ಸಂಸ್ಥೆ ಅಧಿಕಾರಿಗಳು ತಮ್ಮ ಭರವಸೆ ಈಡೇರದೆ ಮತ್ತದೇ ಚಾಳಿ ಮುಂದುವರೆಸಿದ್ದಾರೆ ಈಗಲೂ ಬಸ್ ನಿರ್ವಾಹಕರು ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿ ಗಳು ದಿಡೀರ್ ಪ್ರತಿಭಟನೆಗೆ ಮುಂದಾದ ಘಟನೆ ಹನೂರು ಪಟ್ಟಣದಲ್ಲಿ ನಡೆದಿದೆ.

ಅಜ್ಜೀಪುರ, ರಾಮಪುರ , ಕೌದಳ್ಳಿ ಶಾಗ್ಯ ಭಾಗದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಇದರಿಂದ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಕೊಳ್ಳೇಗಾಲ – ಮೈಸೂರು ಶಾಲಾ ಕಾಲೇಜುಗಳಿಗೆ ತೆರಳಿಗೂ ಆಗುತ್ತಿಲ್ಲ ಅಲ್ಲದೆ ಕಾಲೇಜಿಗೆ ಲೇಟಾಗಿ ಹೋದರೆ ಕಾಲೇಜಿನಲ್ಲಿ ಸಹ ಸೇರಿಸುತ್ತಿಲ್ಲ ಹೀಗೆ ಆದರೆ ನಿಮ್ಮ ಭವಿಷ್ಯ ಏನಾಗಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಪ್ರತಿಭಟನೆ ನಡೆಸಲು ಮುಂದಾದಾಗ ಸ್ಥಳದಲ್ಲಿ ಇರಬೇಕಾದ ಟಿಸಿ ಅವರು ಸ್ಥಳದಲ್ಲಿ ಇರಲಿಲ್ಲ ಈ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿ ವಿದ್ಯಾರ್ಥಿಗಳನ್ನು ಮನಹೋಲಿಸುವ ಪ್ರಯತ್ನ ಮಾಡಿದರು.

ಡಿಪೋ ವ್ಯವಸ್ಥಾಪಕರು ಬರೋವರೆಗೂ ಬಸ್ ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಕುಳಿತ ಪ್ರಸಂಗ ಜರುಗಿತು ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳನ್ನು ಸಮಾಧಾನ ಮಾಡುವುದಕ್ಕೆ ಹರಸಾಹಸ ಪಟ್ಟರು ಹಾಗೂ ಪೊಲೀಸರು ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲೇ ಮೊಕ್ಕಂ ಹೂಡಿದರು.

ಈ ನಡುವೆ, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿ ಮನವಿ ಪತ್ರ ಕೊಟ್ಟರು ಯಾವುದೇ ಪ್ರಯೋಜನವಾಗುತ್ತಿಲ್ಲ ಹಾಗೂ ಇನ್ನು ಎಷ್ಟು ಬಾರಿ ಪ್ರತಿಭಟನೆ ಮಾಡಬೇಕು ವಿದ್ಯಾರ್ಥಿ ಜೀವನ ಕೇವಲ ಇದಕ್ಕಾಗಿ ಇರೋದ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ.

ಪ್ರತಿ ಬಾರಿ ಪ್ರತಿಭಟನೆ ಮಾಡಿದಾಗ ಬರೀ ಭರವಸೆ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆ ಹೊರೆತು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸುತ್ತಿಲ್ಲ. ಇಲ್ಲಿನ ಟಿಸಿಯನ್ನು ವರ್ಗಾವಣೆ ಮಾಡಿ ಬೇರೆಯವರನ್ನು ನಿಯೋಜಿಸುತ್ತೇನೆ ಹಾಗೂ ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ನೋಡಿಕೋಳ್ಳುತ್ತೇವೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

Related posts