ಲವ್ ಜಿಹಾದ್ ವಿರುದ್ಧ ಸಂಘ ಪರಿವಾರ ನಿರಂತರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಇದೀಗ ಸಂಘದ ವಿವಿಧ ಕ್ಷೇತ್ರಗಳಲ್ಲೊಂದಾದ ರಾಜಕೀಯ ಪಕ್ಷ ಬಿಜೆಪಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ಲವ್ ಜಿಹಾದಿ ತಡೆಯಲು ಕಾನೂನಿನ ಅಗತ್ಯದ ಬಗ್ಗೆ ಚರ್ಚೆ ಸಾಗಿರುವಾಗಲೇ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ಕಾನೂನು ಜಾರಿಗೆ ಮುನ್ನುಡಿ ಬರೆದಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಈ ಸಂಬಂಧ ಸುಗ್ರೀವಾಜ್ಯೇಯನ್ನು ಹೊರಡಿಸಿ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ವಿವಾಹಕ್ಕಾಗಿ ಧಾರ್ಮಿಕ ಮತಾಂತರವಾಗುವುದರ ವಿರುದ್ಧ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದ್ದು ಬಳಿಕ ಇದೀಗ ಕಾನೂನಾಗಿ ಮಾರ್ಪಟ್ಟಿದೆ. ಕಾನೂನು ಉಲ್ಲಂಘಿಸಿದರೆ 10 ವರ್ಷದವರೆಗೂ ಜೈಲು ಶಿಕ್ಷೆಯಾಗಲಿದೆ.
ಆರೆಸ್ಸೆಸ್ ವಿಚಾರ ಧಾರೆಗಳನ್ನು ಕಾನೂನು ರೂಪದಲ್ಲಿ ಜಾರಿಗೊಳಿಸುವುದರಲ್ಲಿ ಮೊದಲಿಗರಾಗಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಲವ್ ಜಿಹಾದ್ ವಿರುದ್ಧವೂ ಕಾನೂನು ರೂಪಿಸಿ ದೇಶದ ಗಮನಸೆಳೆದಿದ್ದಾರೆ.