ಪಾಜ್ಹಂ ಪೋರಿ.. ಬಾಳೆಹಣ್ಣು ಬಜ್ಜಿ ಎನ್ನುವವರೂ ಇದ್ದಾರೆ. ಇದು ಕೇರಳೀಯರ ಫೆವರೇಟ್ ಸ್ನಾಕ್ ಎಂದೇ ಜನ ತಿಳಿದಿದ್ದಾರೆ.. ಆದರೆ ಇದು ಉತ್ತಮ ಆರೋಗ್ಯದ ಗುತ್ತಿನ ತಿಂಡಿ ಎಂದೂ ತಿಳಿದ ಮಂದಿ ಈಗೀಗ ಎಲ್ಲೆಡೆಯ ಮಂದಿ ತಿನ್ನುತ್ತಾರೆ. ಅದರ ಸ್ವಾದಿಷ್ಟ ಗೊತ್ತಾದ ನಂತರವಂತೂ ಇಷ್ಟಪಡದೆ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ಅನೇಕರು. ಬಾಳೆಹಣ್ಣಿನ ನವಗೆ ಮಾಡುವ ವಿಧಾನ ಹೀಗಿದೆ ನೋಡಿ..
ಬೇಕಾಗುವ ಸಾಮಗ್ರಿ:
- ಬಾಳೆ ಹಣ್ಣು
- ಮೈದಾ 1 ಕಪ್
- ಅಕ್ಕಿಹುಡಿ ಅರ್ಧ ಕಪ್
- ಸಕ್ಕರೆ 2 ಚಮಚ
- ಅರಶಿನ ಹುಡಿ ಅರ್ಧ ಚಮಚ
- ಕಪ್ಪು ಎಳ್ಳು ಅರ್ಧ ಚಮಚ
- ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
- ಬಾಳೆಹಣ್ಣಿನ್ನು ಬೇಕಾದ ಹಾಗೆ ಕಟ್ ಮಾಡಿಕೊಳ್ಳಬೇಕು. ಮೈದಾ, ಅಕ್ಕಿಹುಡಿ (2:1 ಹೇಳಿ ಲೆಕ್ಕ), ಸಕ್ಕರೆ, ಅರಿಶಿನ, ಕಪ್ಪು ಎಳ್ಳು, ಉಪ್ಪು ಎಲ್ಲ ಹಾಕಿ ಒಂದರಿ ಕಲಸಿ. ಮತ್ತೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟಿನ ನೀರು ಮಾಡಿಕೊಳ್ಳಬೇಕು. ಆ ಹಿಟ್ಟಿನಲ್ಲಿ ಬಾಳೆಹಣ್ಣನ್ನು ಅದ್ದಿ ಅದ್ದಿ ಎಣ್ಣೆಯಲ್ಲಿ ಹಾಕಬೇಕು.
ಇದನ್ನೂ ಓದಿ.. ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’