ಮಂಗಳೂರು ಮೂಲದ ರೌಡಿಶೀಟರ್ ತುಕ್ಕ ನೌಫಲ್ ಬರ್ಬರ ಹತ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಖ್ಯಾತ ರೌಡಿ ತುಕ್ಕ ನೌಫಲ್ ಎಂಬಾತ ಬರ್ಬರವಾಗಿ ಕೊಲೆಯಾಗಿದ್ದಾನೆ.

ಕೇರಳ ರಾಜ್ಯದ ಕಾಸರಗೋಡು ಉಪ್ಪಳ ಬಳಿ ಹಂತಕರು ಕುಖ್ಯಾತ ರೌಡಿ ತುಕ್ಕ ನೌಫಲ್’ನನ್ನ ಕೊಲೆ ಮಾಡಿದ್ದಾರೆ.

ಮಂಗಳೂರು ಮೂಲದ ರೌಡಿಶೀಟರ್ ತುಕ್ಕ ನೌಫಲ್ ಕರಾವಳಿ ಜಿಲ್ಲೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಲ್ಲಿ ಭಾಗಿಯಾಗಿದ್ದ ಆರೋಪ ಹೊಂದಿದ್ದಾನೆ. ಕೊಲೆ, ಸುಲಿಗೆ, ದರೋಡೆ ಸಹಿತ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ ಪೊಲೀಸರ ಎಚ್ಚರಿಕೆಗೂ ಜಗ್ಗಲಿಲ್ಲ. ಮಂಗಳೂರು ಪೊಲೀಸರ ಹೇಳಿಕೆ ಪ್ರಕಾರ ಈತ ಕ್ಲಾಸ್ ಒನ್ ರೌಡಿ ಎಂದು ಬಿಂಬಿತನಾಗಿದ್ದ.

ಮಂಗಳೂರಿನ ಫೈಝಲ್ ನಗರ ನಿವಾಸಿ ನೌಫಲ್ ಕೊಲೆಯಾಗಿರುವ ಬಗ್ಗೆ ಪಡೆದ ಮಂಗಳೂರು ನಗರ ಪೊಲೀಸರ ತಂಡ ಕಾಸರಗೋಡಿಗೆ ತೆರಳಿ ಕಲೆಹಾಕಿದೆ.

Related posts