ಸಿಎಂ ಬದಲಾವಣೆ ಮುಂದಿನ ದೆಹಲಿ‌ ಪ್ರವಾಸದ ಬಳಿಕ? ಸುನಿಲ್ ಕುಮಾರ್ ಮಾರ್ಮಿಕ ಪ್ರಶ್ನೆ

ಬೆಂಗಳೂರು: ಜಾತಿ ಜನಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ನಿಲುವೇನು ಎಂದು ಬಿಜೆಪಿ ನಾಯಕ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಸಿ.ಎಂ ಸಿದ್ದರಾಮಯ್ಯ ತಾವೇ 5 ವರ್ಷ ಮುಖ್ಯಮಂತ್ರಿಯಾಗಿರುವುದಾಗಿ ಹೇಳಿದ್ದಾರೆ. ಬಹಳ ಸಂತೋಷ ! ಆದರೆ ಎಷ್ಟು ದಿನ ಈ ಸಂತೋಷ ಅನುಭವಿಸಬೇಕೆಂಬ ಪ್ರಶ್ನೆ ಕಾಡುತ್ತಿದೆ ಎಂದು ಸುನಿಲ್ ಕುಮಾರ್ ವ್ಯಾಖ್ಯಾನಿಸಿದ್ದಾರೆ.

‘ಜಾತಿ ಗಣತಿ ವಿಚಾರದಲ್ಲೂ ನೀವು ಹೀಗೆ ಹೇಳಿದ್ದು ಯಾರೇ ವಿರೋಧಿಸಿದರೂ ನಾನು ಜಾತಿ ಗಣತಿ ವರದಿ ಅನುಷ್ಠಾನ ಮಾಡಿಯೇ ಮಾಡುತ್ತೇನೆ ಎಂದು ಹೂಂಕರಿಸಿದ್ದಿರಿ’ ಎಂದು ಕುಟುಕಿರುವ ಶಾಸಕ ಸುನಿಲ್ ಕುಮಾರ್, ಹೈಕಮಾಂಡ್ ‘ವರದಿ ಜಾರಿ ಬೇಡ’ ಎಂದು ಕುಟುಕುತ್ತಿದ್ದಂತೆ ಬೆಕ್ಕಿನ ಮರಿಯ ಹಾಗೆ ವರದಿಯನ್ನು ತಿಪ್ಪೆಗೆ ಎಸೆದಿರಿ’ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲೂ ಹಾಗೆಯೇ? ಎಂದು ಪ್ರಶ್ನಿಸಿದ್ದಾರೆ.

ಐದು ವರ್ಷ ತಾನೇ ಸಿಎಂ ಎಂಬ ತಮ್ಮ ಹೇಳಿಕೆಯನ್ನು ‘ಮುಂದಿನ ಬದಲಾವಣೆ ದೆಹಲಿ‌ ಪ್ರವಾಸದ ಬಳಿಕ’ ಎಂದು ಅರ್ಥೈಸಿಕೊಳ್ಳಬಹುದೇ? ಎಂದು ಪ್ರಶ್ನಿಸಿ ಸುನಿಲ್ ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

Related posts