ದೆಹಲಿ: ಸಾಮಾಜಿಕ ಜಾಲತಾಣಗಳ ಬಗ್ಗೆ ಜಿಗುಪ್ಸೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾ ವೇದಿಕೆಯಿಂದ ನಿರ್ಗಮಿಸಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ವ್ಯವಸ್ಥೆಯಿಂದಾಗಿ ತಾವು ಛೀಮಾರಿಗೊಳಗಾಗುವ ಪ್ರಸಂಗಗಳಿಂದ ದೂರ ಉಳಿತುವುದು ಅವರ ಉದ್ದೇಶವಾಗಿದೆ.
ಈ ಕುರಿತಂತೆ ಅಚ್ಚರಿಯ ತೀರ್ಮಾನವನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಖಾತೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್ ತೀವ್ರ ಸಂಚಲನ ಉಂಟುಮಾಡಿದೆ.
ದೆಹಲಿ ಹಿಂಸಾಚಾರ ಸಹಿತ ಹಲವು ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಅಪಬಳಕೆಯಾಗುತ್ತಿವೆ. ಇದಕ್ಕೆ ನಿರ್ಬಂಧ ವಿಧಿಸುವ ಬಗ್ಗೆ ಹಲವಾರು ಸಲಹೆಗಳೂ ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಚ್ಚರಿಯ ನಿರ್ದಾರ ಪ್ರಕಟಿಸಿದ್ದಾರೆ.
ಪ್ರಸ್ತುತ ಫೇಸ್ಬುಕ್’ನಲ್ಲಿ ಸುಮಾರು 4.4 ಕೋಟಿ ಫಾಲೋವರ್ಸ್ ಹೊಂದಿರುವ ಮೋದಿ, ಟ್ವೀಟರ್’ನಲ್ಲೂ ಅವರಿಗೆ ಸುಮಾರು 5.3 ಕೋಟಿ ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸುಮಾರು ಮೂರೂವರೆ ಕೋಟಿ ಮಂದಿ ಮೋದಿ ನಡೆಯನ್ನು ಗಮನಿಸುತ್ತಿದ್ದಾರೆ. ಆದರೂ ಅವರು ಇದೀಗ ಅವರು ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಮೋದಿ ಏನೇ ನಿರ್ಧಾರ ಕೈಗೊಂಡರೂ ಅವರ ಅಭಿಮಾನಿಗಳು ಅದನ್ನು ಫಾಲೋ ಮಾಡುತ್ತಾರೆ. ಚೌಕೀದಾರ್ ಸಹಿತ ಹಲವು ಅಭಿಯಾನಗಳು ಇದಕ್ಕೆ ಸಾಕ್ಷಿಯಾಗಿವೆ. ಇದೀಗ ಸೋಶಿಯಲ್ ಮೀಡಿಯಾಗಳಿಂದ ದೂರ ಸರಿಯುವ ಮೋದಿ ನಿರ್ಧಾರವನ್ನು ಅವರ ಅಭಿಮಾನಿ ಬಳಗ ಯಾವ ರೀತಿ ಅನುಸರಿಸುತ್ತದೆ ಎಂದು ಕಾದುನೋಡಬೇಕಿದೆ.