ಪಾಟ್ನಾ: ಬಿಜೆಪಿಯಿಂದ ಜೆಡಿಯು ಅಂತರ ಕಾಯ್ದುಕೊಂಡಿದೆ ಎಂಬ ಅಂತೆ-ಕಂತೆಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ. ತಮ್ಮ ಪಕ್ಷ ಈಗಿನ್ನೂ ಏನ್.ಡಿ.ಎ. ಮೈತ್ರಿ ಕೂಟದಲ್ಲೇ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದು, ಏನ್.ಡಿ.ಎ. ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ ಹಾಗೂ ಜೆಡಿಯು ಪಕ್ಷಗಳು ತಂತ್ರಗಾರಿಕೆಯಲ್ಲಿ ತೊಡಗಿವೆ. ಆದರೂ ಕೆಲ ಸಮಯದ ಹಿಂದಿನ ಕೆಲವು ಪ್ರಸಂಗಗಳು ಬಿಜೆಪಿ-ಜೆಡಿಯು ಸಂಬಂಧದಲ್ಲಿ ಬಿರುಕಿದೆ ಎಂಬುದನ್ನು ಸಾರುವಂತಿತ್ತು. ಈ ನಡುವೆ ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಅವರೊಂದಿಗಿನ ನೋಟೀಸ್ ಕುಮಾರ್ ಭೇಟಿ ಈ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕಗಳನ್ನು ನೀಡಿತು. ಇದೀಗ ಈ ಎಲ್ಲಾ ಅಂತೆ ಕಂತೆಗಳು ಸುಳ್ಳು ಎಂದು ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪಾಟ್ನಾದಲ್ಲಿ ನಡೆದ ಜೆಡಿಯು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏನ್.ಡಿ.ಎ. ಮೈತ್ರಿ ಕೂಟ ೨೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಆ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.