ದೆಹಲಿ: ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೋಲಾಹಲ ಸೃಷ್ಟಿಸಿರುವ ಕೊರೋನಾ ರೂಪಾಂತರಿ ಭಾರತದಲ್ಲೂ ತಲ್ಲಣ ಸೃಷ್ಟಿಸಿದೆ. ಈರೋಪಾಂತರಿ ಸೋಂಕಿತರ ಸಂಖ್ಯೆ ಭಾರತದಲ್ಲೂ 29ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಶುಕ್ರವಾರ ಮತ್ತೆ 4 ಹೊಸ ರೂಪಾಂತರಿ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದೆ.
ದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್ಸಿಡಿಸಿ) ಲ್ಲಿ 8 ಜನರ ಮಾದರಿಗಳಲ್ಲಿ ರೂಪಾಂತರಿತ ಬ್ರಿಟನ್ ಸೋಂಕು ಪತ್ತೆಯಾಗಿದೆ. ಇತ್ತ ಬೆಂಗಳೂರಿನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಅನುಕ್ರಮವಾಗಿದೆ ಆಸ್ಪತ್ರೆ (ನಿಮ್ಹಾನ್ಸ್)ಯ್ಲಲೂ 10 ಮಾದರಿಗಳಲ್ಲಿ ಬ್ರಿಟನ್ ದೃಢವಾಗಿದೆ.