ಕೃಷಿ ಕಾಯ್ದೆ ವಿವಾದ; ಸಂಧಾನ ವಿಫಲವಾದರೆ ಮಾಲ್, ಬಂಕ್ ಬಂದ್; ರೈತರ ಎಚ್ಚರಿಕೆ

ದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಹಿನ್ನೆಲೆಯಲ್ಲಿ ಜನವರಿ 4ರ ಸಂಧಾನ ಮಾತುಕತೆ ವಿಫಲವಾದರೆ ಹರ್ಯಾಣದಲ್ಲಿ ಮಾಲ್, ಪೆಟ್ರೋಲ್ ಬಂಕ್’ಗಳನ್ನು ಬಂದ್ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಈ ವರೆಗೆ ನಡೆದ ಸಭೆಗಳಲ್ಲಿ ನಮ್ಮ ಬೇಡಿಕೆಯ ಶೇ.5ರಷ್ಟು ವಿಷಯಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ. ಹಾಗಾಗಿ ಜನವರಿ ೪ ರಂದು ಸರ್ಕಾರ ತಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳದಿದ್ದರೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ರೈತ ಮುಖಂಡ ವಿಕಾಸ್ ಹೇಳಿದ್ದಾರೆ.

Related posts