ಮಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿ; ಈ ಪ್ರದೇಶದಲ್ಲಿ ವಾಹನಗಳಲ್ಲಿ ಹಾರ್ನ್ ನಿಷೇಧ.. ಉಲ್ಲಂಘಿಸಿದರೆ ದುಬಾರಿ ದಂಡ..

ಮಂಗಳೂರು: ವೇಗವಾಗಿ ಬೆಳೆಯುತ್ತಿರುವ ಬಂದರು ನಗರಿ ಮಂಗಳೂರಿನಲ್ಲಿ ಪೊಲೀಸರು ಕ್ಷಿಪ್ರ ತೀರ್ಮಾನವೊಂದನ್ನು ಪ್ರಕಟಿಸಿದ್ದಾರೆ.

ಮಂಗಳೂರಿನಲ್ಲಿ ಇನ್ನು ಮುಂದೆ ವಾಹನ ಸಾವಾರು ಹಾಗೂ ಚಾಲಕರು ಎಲ್ಲೆಂದರಲ್ಲಿ, ಹೇಗೆಂದರಲ್ಲಿ ಹಾರ್ನ್ ಹಾಕುವಂತಿಲ್ಲ. ಹಾರ್ನ್ ಕರ್ಕಶ ಧ್ವನಿ ನಿರ್ಬಂಧ ನಿಯಮ‌ ಜಾರಿಗೊಳಿಸಲಾಗಿದೆ.

ವಾಹನಗಳ ಹಾರ್ನ್ ಶಬ್ಧದ ಕಾರಣದಿಂದ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಹೊತ ದೃಷ್ಟಿಯಿಂದ, ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ಮಂಗಳೂರು ನಗರದ ಕೆಲಚ ಪ್ರದೇಶಗಳನ್ನು ಹಾರ್ನ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್)ರಂತೆ ಈ ಕ್ರಮ ಜಾರಿಗೊಳಿಸಲಾಗಿದ್ದು, ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ಉಲ್ಲಂಘನೆಗಾಗಿ 1000 ರೂಪಾಯಿ ದಂಡ, ಅನಂತರದ ಪ್ರತೀ ಉಲ್ಲಂಘನೆಗೆ 2000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಹಾರ್ನ್ ನಿಷೇಧಿತ ಪ್ರದೇಶಗಳು:

1. ಲೇಡಿಗೋಷನ್ ಆಸ್ಪತ್ರೆಯ ಸುತ್ತುಮುತ್ತಲಿನ ಪ್ರದೇಶ:

  • ರಾವ್ & ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ.

  • ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್ ವರೆಗೆ

  • ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ ವರೆಗೆ.

2) ಹಂಪನಕಟ್ಟೆ ಜಂಕ್ಷನ್‌:

  • ಹಂಪನಕಟ್ಟೆ ಜಂಕ್ಷನ್‍ನಿಂದ ಮಿಲಾಗ್ರಿಸ್ ಚರ್ಚ್ ವರೆಗಿನ ಪ್ರದೇಶ.

  • ಮಿಲಾಗ್ರಿಸ್ ಚರ್ಚ್ ಬಳಿಯ ವೆನ್ಲಾಕ್ ಆಸ್ಪತ್ರೆಯ ಗೇಟ್ (Causality Gate)ನಿಂದ ಮುತ್ತಪ್ಪ ಗುಡಿಯವರೆಗೆ.

  • ಹಂಪನಕಟ್ಟೆ ಜಂಕ್ಷನ್‌ನಿಂದ ಮಿನಿ ವಿಧಾನ ಸೌಧ ಕಟ್ಟಡದವರೆಗೆ.

3) ಡಾ. ಅಂಬೇಡ್ಕರ್ ವೃತ್ತದ ಸುತ್ತಲಿನ ಪ್ರದೇಶ:

  • ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50 ಮೀಟರ್ ಪ್ರದೇಶ.

  • ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.

  • ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.

  • ಬಾವುಟಗುಡ್ಡ (ಮಹಿಳಾ ಸಭಾ ಕಟ್ಟಡ) ದಿಂದ ಅಂಬೇಡ್ಕರ್ ವೃತ್ತದ ವರೆಗೆ.

4) ಅತ್ತಾವರ KMC ಆಸ್ಪತ್ರೆಯ ಬಳಿಯಿಂದ ಬಿಷಪ್ ವಿಕ್ಟರ್ (ಅತ್ತಾವರ ನ್ಯೂ ರೋಡ್) ತಿರುವಿನವರೆಗೆ.

5) ದೇರಳಕಟ್ಟೆ ಯೇನಪೋಯ ಆಸ್ಪತ್ರೆ ಬಳಿ 100 ಮೀಟರ್ ಪ್ರದೇಶ.

6) ದೇರಳಕಟ್ಟೆ KS HEGDE ಆಸ್ಪತ್ರೆ ಬಳಿ 100 ಮೀಟರ್ ಪ್ರದೇಶ.

.https://twitter.com/compolmlr/status/1726619196484948097?t=bFo7GqAiN0zb-DdXC15PQQ&s=19

Related posts