ರಾಜ್ಯದಲ್ಲೂ ವೈನ್ ಶಾಪ್ ಬಂದ್ ಆಗುತ್ತಾ? ಇಂಥದ್ದೊಂದು ಪ್ರಶ್ನೆಗಳು ಈಗ ಎಲ್ಲೆಲ್ಲೂ ಮಾರ್ಧನಿಸುತ್ತಿದೆ.
ರಾಜ್ಯ ಕೊರೋನಾ ಸಂಕಷ್ಟಕಾಲದಲ್ಲಿದ್ದು ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಲಾಕ್‌ಡೌನ್‌ನ ಎರಡು ಅವಧಿಗಳಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದವು. ಆದರೆ ಕಳೆದೊಂದು ವಾರದಲ್ಲಿ ಮದ್ಯದ ಹೊಳೆಯೇ ಹರಿಯುತ್ತಿದೆ. ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದೇ ತಡ, ಎಣ್ಣೆ ಪ್ರಿಯರು ವೈನ್ ಸ್ಟೋರ್‌ಗಳ ಮುಂದೆ ಜನ ಜಾತ್ರೆಗೆ ಸಾಕ್ಷಿಯಾಗಿದ್ದರು. ಅಷ್ಟೇ ಅಲ್ಲ ಮದ್ಯ ಮಾರಾಟಗಾರರ ಒತ್ತಡಕ್ಜೆ ಮಣಿದ ಸರ್ಕಾರ ಇದೀಗ ಬಾರ್‌ಗಳಲ್ಲೂ ಮದ್ಯ ಮಾರಾಟಕ್ಜೆ ಅನುಮತಿ ನೀಡಿದೆ.
ಈ ನಡುವೆ ಮದ್ಯ ಮಾರಾಟಕ್ಜೆ ಅನುಮತಿ ನೀಡಿರುವ ಕ್ರಮ ಬಿಎಸ್‌ವೈ ಸರ್ಕಾರಕ್ಕೆ ತಿರುಗುಬಾಣವಾಗಲಿದೆಯೇ ಎಂಬ ಪ್ರಶ್ನೆಯೂ ಕಾಡುವಂತಾಗಿದೆ. ತುಮಕೂರು, ಕೊಪ್ಪಳ ಸಹಿತ ರಾಜ್ಯದ ವಿವಿಧೆಡೆ ಮಹಿಳೆಯರು ಸರ್ಕಾರದ ವಿರುದ್ದ ಸಿಡಿದೆದ್ದಿದ್ದು ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ.. ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ
ಅತ್ತ ಸುಪ್ರೀಂ ಕೋರ್ಟ್ ಕೂಡಾ ಮದ್ಯದಂಗಡಿಗಳಲ್ಲಿ ಲಿಕ್ಕರ್ ಮಾರಾಟ ಸೇಫ್ ಅಲ್ಲ ಎಂದು ದಾವೆಯೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ. ನೇರ ಮಾರಾಟದ ಬದಲು ಆನ್‌ಲೈನ್ ಮಾರಾಟ ಬಗ್ಗೆ ಪರಿಶೀಲಿಸುವಂತೆ ಸರ್ಕಾರಗಳಿಗೆ ಸೂಚಿಸಿದೆ. ಇನ್ನೊಂದೆಡೆ ತಮಿಳುನಾಡಿನಾದ್ಯಂತ ಇರುವ ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮದ್ಯದಂಗಡಿ ಹಾಗೂ ಬಾರ್‌ಗಳು ಬಂದ್ ಆಗುವ ಪರಿಸ್ಥಿತಿ ಬಂದೊದಗಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ.. ಸುಸಂಸ್ಕೃತರ ನಾಡಲ್ಲಿ ವಿಕೃತಿ; ಪತ್ನಿ ಮೇಲೆಯೇ ಕ್ರೌರ್ಯ