NW’KSRTC ಕ್ರಾಂತಿ.. ಬರೋಬ್ಬರಿ 450 ಹೊಸ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆ.. ಗ್ರಾಮೀಣ ಜನರಿಗೆ ಬಂಪರ್

ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ದೇಶದಲ್ಲೇ ಜನಪ್ರಿಯತೆ ಪಡೆದಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದೀಗ ಎಲೆಕ್ಟ್ರಿಕ್ ಬಸ್ಸುಗಳ ಮೂಲಕ ಮತ್ತೊಂದು ಕ್ರಾಂತಿಗೆ ಮುನ್ನುಡಿ ಬರೆದಿದೆ. ಉತ್ತರ ಕರ್ನಾಟಕದಲ್ಲಿ ಇನ್ನು ಮುಂದೆ ಎಲೆಕ್ಟ್ರಿಕ್ ಬಸ್ಸುಗಳ ಹವಾ ಸೃಷ್ಟಿಸಲು ಪ್ರಕ್ರಿಯೆ ಆರಂಭಿಸಿರುವ NWKSRTC ಬರೋಬ್ಬರಿ 450 ಎಲೆಕ್ಟ್ರಿಕ್ ಬಸ್ಸುಗಳ GCC ಮಾದರಿಯಲ್ಲಿ ಕಾರ್ಯಾಚರಣೆಗೆ ಅನುಮತಿ ಪಡೆದಿದೆ.

NW’KSRTC’ಗೂ ಶಕ್ತಿ ತಂದ ‘ಶಕ್ತಿ’

ಶಕ್ತಿ ಯೋಜನೆ ಜಾರಿಯ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತಷ್ಟು ಜನಪ್ರಯವಾಗಿದೆ.  NW’KSRTC’ ವ್ಯಾಪಿಯಿಯಲ್ಲಿನ ಉತ್ತರ ಕರ್ನಾಟಕ ಭಾಗದಲ್ಲೇ ಸರಾಸರಿ 25 ಲಕ್ಷಕ್ಕೂ ಹೆಚ್ಚು ಜನರ ಜೀವನಾಡಿಯಾಗಿ ಸಾರಿಗೆ ಸಂಸ್ಥೆ ಗುರುತಾಗಿದೆ. ಇದೇ ಸಂದರ್ಭದಲ್ಲಿ NW’KSRTC’ಗೆ ಬರೋಬ್ಬರಿ 450 ಎಲೆಕ್ಟ್ರಿಕ್ ಬಸ್ಸುಗಳ GCC ಮಾದರಿಯಲ್ಲಿ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಚಿವ ರಾಮಲಿಂಗರೆಡ್ಡಿ, ‘ಶಕ್ತಿ’ ಯೋಜನೆಗೆ ಮೊದಲು ನಿತ್ಯ 17.48 ಲಕ್ಷ ಜನರು NW’KSRTC’ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ‘ಶಕ್ತಿ’ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ 26 ಲಕ್ಷಕ್ಕೆ ಗೆಚ್ಚಾಗಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ (NWKSRTC) ನೂತನ ಬಸ್ಸುಗಳ ಸೇರ್ಪಡೆಗೆ ಸಾರಿಗೆ ಸಚಿವರು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.

ಉ.ಕ. ಗ್ರಾಮಗಳತ್ತ ಚಿತ್ತ:

ಶಕ್ತಿ ಯೋಜನೆ ಜಾರಿಯ ನಂತರ  ನಗರ ಸಾರಿಗೆ ವ್ಯಾಪ್ತಿಯಲ್ಲೂ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆಯನ್ಬಾಧರಿಸಿ ಬೇಡಿಕೆಗೆ ತಕ್ಜಂತೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮವಹಿಸಲಾಗಿದೆ. ಅದರ ಭಾಗವಾಗಿ ಒಟ್ಟು 450 ಎಲೆಕ್ಟ್ರಿಕ್‌ ಬಸ್ಸುಗಳ ಕಾರ್ಯಾಚರಣೆಗೆ ಯೋಜಿಸಲಾಗಿದೆ. ಅವುಗಳಲ್ಲಿ 200 ಗ್ರಾಮಾಂತರ ಸಾರಿಗೆ ಬಸ್ಸುಗಳು, 150 ನಗರ ಸಾರಿಗೆ ಮಾದರಿ ಹಾಗೂ 100 BRTS ಮಾದರಿ ಬಸ್ಸುಗಳು ಸೇರಿವೆ.  ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್ಸುಗಳನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ (NWKSRTC) ವ್ಯಾಪ್ತಿಗೊಳಪಟ್ಟಿರುವ  ಹುಬ್ಬಳ್ಳಿ-ಧಾರವಾಡ ಸಾರಿಗೆ ವಿಭಾಗ, ಹುಬ್ಬಳ್ಳಿ ಗ್ರಾಮಾಂತರ, ಧಾರವಾಡ ಹಾಗೂ ಬೆಳಗಾವಿ ವಿಭಾಗಗಳಿಂದ ಕಾರ್ಯಾಚರಣೆ ಮಾಡಲು ನಿಗಮ ನಿರ್ಧರಿಸಿದೆ.

Related posts