ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಲಿ, ತುಮಕೂರು ಜಿಲ್ಲೆಯವರಿಗೆ ಸಿಎಂ ಸ್ಥಾನ ಸಿಗಲಿ; ರಾಜಣ್ಣ ವಾಕ್ ವೈಖರಿಯ ಅಚ್ಚರಿ

ತುಮಕೂರು: ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಸಾಗಿರುವಾಗಲೇ ರಾಜಣ್ಣ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಸಿದ್ದರಾಮಯ್ಯ ಅವರು ಸಿಎಂ ಆಗಿ ಇರುವವರೆಗೆ ನಾವೆಲ್ಲ ಸಿದ್ದರಾಮಯ್ಯ ಪರವಾಗಿದ್ದೇವರ, ಸಿದ್ದರಾಮಯ್ಯ ಹೊರತು ಪಡಿಸಿದರೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಎಂದು ಬಯಸುತ್ತೇವೆ ಎಂದು ರಾಜಣ್ಣ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಕೆ.ಎನ್.ರಾಜಣ್ಣ, ಸಚಿವರು

ನೂತನ ಪೊಲೀಸ್ ಸಮುಚ್ಛಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಈಗ ಗೃಹ ಸಚಿವರಾಗಿದ್ದಾರೆ. ಮುಂದೆ ಅವರು ಏನು ಬೇಕಾದರೂ ಆಗಬಹುದು ಎಂದರು.
ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗುತ್ತಾರೆ ಅಂತಾದರೆ ನಾವೆಲ್ಲ ಸಂತೋಷ ಪಡುತ್ತೇವೆ. ನಾವೆಲ್ಲ ಮುಖ್ಯಮಂತ್ರಿ ಆದಂತೆ ಎಂದು ಭಾವಿಸುತ್ತೇನೆ ಎಂದೂ ರಾಜಣ್ಣ ಹೇಳಿದರು.

ಪಕ್ಷದ ವಿಚಾರಗಳನ್ನು ಮಾತನಾಡದಂತೆ ಎಐಸಿಸಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಆದರೂ ನನ್ನ ಮನಸಿನ ಭಾವನೆಯನ್ನು ಹೇಳಿದ್ದೇನೆ. ನಾನು ಯಾರಿಗೂ ಹೆದರಲ್ಲ, ಎಐಸಿಸಿಗೂ ಕೂಡ ಹೆದರುವುದಿಲ್ಲ ಎಂದು ರಾಜಣ್ಣ ಹೇಳಿದ ವೈಖರಿಯೂ ಗಮನಸೆಳೆಯಿತು.

Related posts