ಮೇಲ್ಮನೆಗೆ ರಾಜ್ಯ ಬಿಜೆಪಿಯ 12 ಮಂದಿಯ ಪಟ್ಟಿ ಸಿದ್ದ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭರ್ಜರಿ ವಿದ್ಯಮಾನಗಳು ಗರಿಗೆದರಿವೆ. ಕೆಲ ದಿನಗಳ ಹಿಂದಷ್ಟೇ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರ ಪಟ್ಟಿ ಕಡೆಗಣಿಸಿ ತಳಮಟ್ಟದ ಕಾರ್ಯಕರ್ತರನ್ನು ಹೈಕಮಾಂಡ್ ಆಯ್ಕೆ ಮಾಡಿರುವುದರಿಂದಾಗಿ ಈ ಬಾರಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವೇಳೆ ಮುಖಂಡರು ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಈ ಬಾರಿ ಮೇಲ್ಮನೆ ಚುನಾವಣೆಯಲ್ಲಿ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಹಾಗಾಗಿ ಹೆಚ್.ವಿಶ್ವನಾಥ್, ಆರ್.ಶಂಕರ್, ಮತ್ತು ಎಂ.ಟಿ.ಬಿ.ನಾಗರಾಜ್’ಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಈ ನಡುವೆ ಸೋಮವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ೧೨ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಪಟ್ಟಿಗೆ ಹೈಕಮಾಂಡ್ ಅಂಕಿತ ಹಾಕುತ್ತೋ ಅಥವಾ ಬೇರೆ ಇನ್ಯಾರನ್ನೋ ಆಯ್ಕೆ ಮಾಡುತ್ತೋ ಎಂಬ ಕುತೂಹಲ ಕಾಡಿದೆ.

ರಾಜ್ಯದ ಪಟ್ಟಿ ಹೀಗಿದೆ:

ಹೆಚ್.ವಿಶ್ವನಾಥ್, ಆರ್.ಶಂಕರ್, ಮತ್ತು ಎಂ.ಟಿ.ಬಿ.ನಾಗರಾಜ್, ಭಾರತಿ ಶೆಟ್ಟಿ, ಸೊಗಡು ಶಿವಣ್ಣ, ಮಾಲಿಕಯ್ಯ ಗುತ್ತೆದಾರ್, ನಿರ್ಮಲಾ ಕುಮಾರ್ ಸುರಾನ, ಮಹೇಶ್ ತೆಂಗಿನಕಾಯಿ, ಸಿ.ಎನ್.ಶಂಕರಪ್ಪ ಮತ್ತು ಪ್ರತಾಪ್ ಸಿಂಹ ನಾಯಕ್.

ಇದನ್ನೂ ಓದಿ.. ಪರಿಷತ್ ಅಖಾಡದಲ್ಲಿ ಮುಸ್ಲಿಂ ನಾಯಕರಿಗೂ ಪಾಲು ಕೊಡಿ; ನಾಯಕರ ಒತ್ತಡ 

 

Related posts