ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡಕೋಟಾ ಬಿಎಂಟಿಸಿ ಬಸ್! ಪ್ರಯಾಣಿಕರೇ ಬಸ್ ಹತ್ತುವ ಮುನ್ನ ಎಚ್ಚರ ಎಚ್ಚರ ಎಂದು ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ನೀಡಿದೆ.
ಮಾರ್ಗ ಮಧ್ಯೆ ಕೆಟ್ಟುಹೋಗುವ ಹಾಗೂ ಸಾರಿಗೆ ನಿಗಮದ ಅನೇಕಾನೇಕ ಅವಾಂತರಗಳ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬಿಎಂಟಿಸಿ ಬಸ್ಸಿನ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ X ನಲ್ಲಿ ಹಂಚಿಕೊಂಡಿರುವ ಬಿಜೆಪಿ, ‘ಭ್ರಷ್ಟ ಕಾಂಗ್ರೆಸ್ ಸರ್ಕಾರ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಸಾರಿಗೆ ಇಲಾಖೆಗೆ ಅನುದಾನ ನೀಡದೆ, ಬಾಕಿ ಉಳಿಸಿಕೊಂಡು ಡಕೋಟಾ ಬಸ್‌ಗಳನ್ನ ರಸ್ತೆಗೆ ಇಳಿಸಿದೆ’ ಎಂದು ಟೀಕಿಸಿದೆ.
ಒಂದು ಕಡೆ ಬಿಎಂಟಿಸಿ ಬಸ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಅಮಾಯಕರ ಜೀವ ಬಲಿ ಪಡೆದು “ಕಿಲ್ಲರ್ ಬಿಎಂಟಿಸಿ” ಎನ್ನುವ ಅಪಖ್ಯಾತಿ ಗಳಿಸಿವೆ. ಇನ್ನೊಂದು ಕಡೆ ಬಸ್‌ಗಳಲ್ಲಿ ಪ್ರಯಾಣಿಸುವುದಕ್ಕೂ ಜನರು ಭಯ ಪಡುವ ಸ್ಥಿತಿ ಎದುರಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಎಂಬುದೇ ಇಲ್ಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
‘ಇದೇನಾ ನಿಮ್ಮ ಡಕೋಟಾ ಬಸ್ ಗ್ಯಾರಂಟಿ? ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬಿಜೆಪಿ ಪ್ರಶ್ನಿಸಿರುವ ವೈಖರಿಯೂ ಗಮನಸೆಳೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಡಕೋಟಾ ಬಿಎಂಟಿಸಿ ಬಸ್! ಪ್ರಯಾಣಿಕರೇ ಬಸ್ ಹತ್ತುವ ಮುನ್ನ ಎಚ್ಚರ ಎಚ್ಚರ!
ಭ್ರಷ್ಟ @INCKarnataka ಸರ್ಕಾರ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಸಾರಿಗೆ ಇಲಾಖೆಗೆ ಅನುದಾನ ನೀಡದೆ, ಬಾಕಿ ಉಳಿಸಿಕೊಂಡು ಡಕೋಟಾ ಬಸ್‌ಗಳನ್ನ ರಸ್ತೆಗೆ ಇಳಿಸಿದೆ.
ಒಂದು ಕಡೆ ಬಿಎಂಟಿಸಿ ಬಸ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ… pic.twitter.com/pDCzL2cW0K
— BJP Karnataka (@BJP4Karnataka) December 29, 2025
