ಸ್ವಾತಂತ್ರ್ಯ ಉದ್ಯಾನವೇ ‘ಕೂಡಲಸಂಗಮ’, ಸತ್ಯಾಗ್ರಹವೇ ‘ಯುಗಾದಿ’

ಬೆಂಗಳೂರು: ಪಂಚಮಸಾಲಿ ಸನುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ‌ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಸತ್ಯಾಗ್ರಹ 68ನೇ ದಿನದವೂ ಮುಂದುವರಿಯಿತು. ಹೋರಾಟದ ಸ್ಥಳದಲ್ಲೇ ಯುಗಾದಿಯನ್ನು ಆಚರಿಸಿದ ಪಂಚಮಸಾಲಿ ಹೋರಾಟಗಾರರು ತಮ್ಮ ಈ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆಕ್ರೋಶ ಹೊರ ಹಾಕಿದರು.

ಕೆಲವು ದಿನಗಳ ಹಿಂದೆ ಶಿವರಾತ್ರಿ ಹಬ್ಬವನ್ನೂ ಹೋರಾಟದ ಅಖಾಡದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಆಚರಿಸಿದ ಸಮುದಾಯದ ಮಂದಿ, ಇಂದು ಯುಗಾದಿ ಹಬ್ಬವನ್ನೂ ಸತ್ಯಾಗ್ರಹ ಸ್ಥಳದಲ್ಲೇ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪ್ರಧಾನಿ ಕಾರ್ಯಾಲಯ ಮಧ್ಯಸ್ಥಿಕೆ ವಹಿಸಿರುವ ಕಾರಣ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗುವ ಭರವಸೆ ಇದೆ ಎಂದರು. ಪ್ರಧಾನಿ ಮೋದಿಯವರ ಸಾಮಾಜಿಕ ಕಳಕಳಿಯ ಕಾರಣ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದರು‌.

‘ಸತ್ಯಾಗ್ರಹವೇ ಯುಗಾದಿ’ ಸಂದೇಶ ಸಾರಿದ ಶ್ರೀಗಳು: 

ಸರ್ಕಾರವು ಸಮಾಜಕ್ಕೆ ಮಾಡಿದ ಆನ್ಯಾಯ ಎಂಬ ‘ಬೇವನ್ನು’ ಮರೆತು, ಸಮಾಜಕ್ಕೆ ಸಾಮಾಜಿಕ ನ್ಯಾಯ ಪಡೆಯುತ್ತೆವೆ ಎಂಬ ಭರವಸೆಯ ‘ಬೆಲ್ಲವನ್ನು’ ಈ ಎರಡೂ ಸಾವಲನ್ನು ಸಮವಾಗಿ ಸ್ವೀಕರಿಸಿ, ಸಾಮಾಜಿಕ ನ್ಯಾಯ ಸಿಗುವವರೆಗೂ ಹೋರಾಡುವ ಶಕ್ತಿಯನ್ನು ಸೃಷ್ಟಿಕರ್ತ ಪರಮಾತ್ಮ ವಿಶ್ವಗುರು ಬಸವಣ್ಣ ಎಲ್ಲರಿಗೂ ನೀಡಲಿ ಎಂಬ ವಿಶ್ವಾಸದೊಂದಿಗೆ ನೂತನ ವರ್ಷ ಯುಗಾದಿಯನ್ನು ಆಚರಿಸೋಣ ಎಂದು ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. 

‘ನಮಗೆ ಫ್ರೀಡಮ್ ಪಾರ್ಕ ಕೂಡಲಸಂಗಮ, ಸತ್ಯಾಗ್ರಹವೇ ಯುಗಾದಿ’ ಎಂಬ ಶ್ರೀಗಳ ಮಾರ್ಮಿಕ ಹೇಳಿಕೆಯ ಹಿಂದೆ ಸರ್ಕಾರದ ಬಗೆಗಿನ ಆಕ್ರೋಶ ಅಡಗಿದಂತಿತ್ತು‌ 

Related posts