ನಮ್ಮ ರಥ ನಮ್ಮ ಹೆಮ್ಮೆ.. ಕರುನಾಡಿನ ಹೆಮ್ಮೆಯ KSRTC ಸಾಧನೆಯ ಕಿರೀಟಕ್ಕೆ ಮಗದೊಂದು ಗರಿ… ಪ್ರತಿಷ್ಠಿತ ‘Grow Care India Best Strategy ಚಿನ್ನದ ಪ್ರಶಸ್ತಿ’
ಲಕ್ನೋ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಇದೀಗ ಉತ್ತರ ಭಾರತದಲ್ಲೂ ಸುದ್ದಿಯಲ್ಲಿದೆ. ಉತ್ಕುಷ್ಟ ಸೇವೆಗಾಗಿ ಯೋಗಿಯ ನಾಡಿನಿಂದಲೂ ಪುರಸ್ಕಾರ ಸಿಕ್ಕಿದೆ.
ಗ್ರೋ ಕೇರ್ ಇಂಡಿಯಾ ಸಂಸ್ಥೆ ನೀಡುವ ‘Grow Care India Best Strategy’ ಚಿನ್ನದ ಪ್ರಶಸ್ತಿ ಪ್ರಶಸ್ತಿ KSRTC ಪಾಲಿಗೆ ಒಲಿದಿದೆ. ಮಾನವ ಸಂಪನ್ಮೂಲ ವರ್ಗದಲ್ಲಿ ವಿನೂತನ ಉಪಕ್ರಮಗಾಗಿ ಈ ಪ್ರಶಸ್ತಿಯನ್ನು KSRTCಗೆ ನೀಡಲಾಗಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಗ್ರೋ ಕೇರ್ ಇಂಡಿಯಾ ಆಯೋಜಿಸಿದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರೀಯ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಮಾಜಿ ಸದಸ್ಯರಾದ ಡಾ ಮುಜಫರ್ ಅಹಮದ್, ಉತ್ತರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಅದಿತಿ ಉಮ್ರಾವ್, ಗ್ರೋಕೇರ್ ಇಂಡಿಯಾ ಅಧ್ಯಕ್ಷ ರಾಕೇಶ್ ದ್ವಿವೇದಿ ಅವರು ಈ ಪ್ರತಿಷ್ಠಿತ ‘Grow Care India Best Strategy’ ಪ್ರಶಸ್ತಿಯನ್ನು KSRTC ಅಧಿಕಾರಿಗಳಿಗೆ ಪ್ರದಾನ ಮಾಡಿದರು.
KSRTC ಸಂಸ್ಥೆಯ ಪರವಾಗಿ ಭಾಗವಹಿಸಿದ್ದ KSRTC ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಎಂ ದೀಪಕ್ ಕುಮಾರ್, ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.