ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಮ್ಮೆ ಮ್ಯಾಜಿಕ್

ತಿರುವನಂತಪುರ: ಪಡ್ಡೆ ಹುಡುಗರ ನೆಚ್ಚಿನ ತಾರೆ, ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸದಾ ಒಂದಿಲ್ಲೊಂದು ವಿಚಾರಗಳಿಂದಾಗಿ ಸುದ್ದಿಯ ಕೇಂದ್ರಬಿಂದುವಾಗುತ್ತಿದ್ದಾರೆ.

ವಿಂಕಿಂಗ್ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ಓರು ಆಡಾರ್ ಲವ್ ಚಿತ್ರದಲ್ಲಿ ಮಾಡಿದ ಒಂದು ಕಣ್ಸನ್ನೆ, ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಮನೆಮಾಡುವಂತೆ ಮಾಡಿತು.

ಇದೀಗ ಮತ್ತೆ ಕಣ್ಸನ್ನೆ ಮೂಲಕ ಈ ವಿಂಕಿಂಗ್ ಸ್ಟಾರ್ಸುದ್ದಿಗೆ ಗ್ರಾಸವಾಗಿದ್ದಾರೆ. ಬ್ಯೂಟಿ ಪಾರ್ಲರ್’ನಲ್ಲಿ ಕುಳಿತು ಸೆಲ್ಫಿ ಮಿರರ್ ವಿಡಿಯೋದಲ್ಲಿ ಕಣ್ಸನ್ನೆ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವೀಡಿಯೊ ಇದೀಗ ಸಕತ್ ವೈರಲ್ ಆಗುತ್ತಿದೆ.

https://www.instagram.com/reel/CDjGsZBApuV/?utm_source=ig_embed 

Related posts